Thursday, May 22, 2008

ಧೂಮವೆ ನನ್ನುಸಿರು!


ಮೊನ್ನೆ ರೇಡಿಯೋ ಮಿರ್ಚಿಯಲ್ಲಿ ಪಲ್ಲವಿ ನೆಡೆಸಿಕೊಡುವ ಮಿರ್ಚಿ talkies ಕೇಳುತ್ತಾ ಇದ್ದೆ. ಕರ್ಣ ಚಿತ್ರದ ’ಪ್ರೀತಿಯೆ ನನ್ನುರಿಸು’ ಹಾಡು ಪ್ರಸಾರವಾಗುತ್ತಿತ್ತು. ಇದು ’ಪ್ಯಾರ್ ಬಿನ ಚೈನ್ ಕಹಾಂ ರೇ’ ಹಾಡಿನ ರೀಮಿಕ್ಸು. ಅಲ್ಲಾ... ನಮ್ಮಲ್ಲಿ ಈ ರೀಮಿಕ್ಸಿನ ಚಟ ಯಾವಾಗಿಂದಲೋ ಇದೆಯಲ್ಲಾ... ಎಂದುಕೊಳ್ಳುತ್ತಿದ್ದೆ. ಅಷ್ಟಕ್ಕೂ ಒಳ್ಳೆಯದನ್ನ ಕಲಾತ್ಮಕವಾಗಿ ಕನ್ನಡೀಕರಿಸಿದರೆ ತಪ್ಪೇನು ಅನಿಸಿತು. ಅದರ ಜೊತೆಗೇ, ನಿಜವಾಗಿಯೂ ಈ ವಾಯುಮಾಲಿನ್ಯದ ನಡುವೆಯೂ ನಮಗೆ ಪ್ರೀತಿಯೇ ಉಸಿರಾಗಿದೆಯೇ ಎಂದು ಯೋಚಿಸತೊಡಗಿದೆ. ಆಗಿನ ಕಾಲದ ಜನರಿಗೆ ಪ್ರೀತಿಯೇ ಉಸಿರಾಗಿತ್ತೋ ಏನೊ. ಈಗಂತೂ ಬಿ. ಅರ್. ಲಕ್ಷ್ಮಣ್‌ರಾವ್ ಹೇಳಿದಂತೆ,
ಬಿಡಲಾರೆ ನಾ ಸಿಗರೇಟು
ಹುಡುಗಿ ನಿನ್ನಂಥೆಯೇ ಅದು ಥೇಟು
ಬಿಡಬಲ್ಲೆನೇನೆ ನಿನ್ನಾ
ಚಿನ್ನಾ ಹಾಗೆಯೇ ಸಿಗರೇಟನ್ನ
ಎನ್ನುವ ಕಾಲ. ಆದ್ದರಿಂದ ಖಂಡಿತ ಜನರಿಗೀಗ ಧೂಮವೇ ಉಸಿರಾಗಿಬಿಟ್ಟಿದೆ! ಸಿಗರೇಟ್ ಧೂಮದ ಉಂಗುರಗಳ ಗುಂಗಿನಲ್ಲಿ ಈ ರೀಮಿಕ್ಸಿನ ರೀಮಿಕ್ಸ್.


ಧೂಮವೆ ನನ್ನುಸಿರು
ಧೂಮವೆ ನನ್ನುಸಿರು
ದಿನವೂ ಹಗಲು ಸಂಜೆ ರಾತ್ರಿ ಎಲ್ಲೆಂದರೆಲ್ಲಿ
ಹೊಗೆ ಕುಡಿಯುವುದೇ

ಸಿಗರೇಟ್ ಹೊಗೆಯನು ಕುಡಿಯುವುದು
ಕುಡಿಯುತ ಹರುಷವ ಪಡೆಯುವುದು
ಬಾನಲಿ ಉಂಗುರ ಬಿಡಿಸುವುದು
ಸ್ವರ್ಗವು ಇದುವೇಎನ್ನುವುದು
ಹರುಷದಿ ಪರಿಸರ ಕೆಡಿಸುವುದು

ಧೂಮದ ಕಾಟಕೆ ಜಗವೆಲ್ಲ
ಸೊರಗಿ ಹೋಗಿದೆ ಸುಳ್ಳಲ್ಲ
ಸಿಗರೇಟ್ ಸೇವನೆ ನಿಲ್ಲಲ್ಲ
ಹೊಗೆಕುಡಿದವಗೆ ಮುಪ್ಪಿಲ್ಲ
ಯೌವನ ಮುಗಿಯುತೆ ನಾನಿಲ್ಲ

ಒರಿಜಿನಲ್ ಸೌಂಡ್‌ಟ್ರಾಕ್ ಕೇಳಬಯಸುವವರು ಇಲ್ಲಿ ಕ್ಲಿಕ್ಕಿಸಿ.

5 comments:

ದೀಪಕ said...

ಸೂಪರ್ ಗುರು ಸೂಪರ್

ಎಲ್ಲಾದರು ಇರು ಎ೦ತಾದರೂ ಇರು ಎ೦ದೆ೦ದಿಗು ನೀ ಧೂಮದ ಜೊತೆಗಿರು
ಧೂಮದ ಹೊಗೆಯೇ ಸತ್ಯ ಧೂಮದ ಹೊಗೆಯೇ ನಿತ್ಯ

ಇದು ಮನೆಯಿ೦ದ ಹೊರಗೆ ಹೊರೆಟರೆ ಆಗುವ ಅನುಭವ.

- ದೀಪಕ

ravikumar.a said...

namaste,
"smoking is injurious to health"-
---antha gotthiddaru,
sedi-sevisi-life
enjoy(haalu?)maadi!

"sigareetu matthu hudugiye
eege
yaavagalu kaadatodagutthave,

baayiya hanginalli
manada gunginalli.

danyavaadagau inthi nimma
ravikumar.a

Vijayalakshmi said...

A good remix Siddharth. People always want to do what they enjoy, whether it affects them or others doesn't matter. And I dont know why whether good or bad, a girl is always taken as an example.

ಸಿದ್ಧಾರ್ಥ said...

@ದೀಪಕ, ರವಿಕುಮಾರ್
ಧನ್ಯವಾದಗಳು...

@ವಿಜಿ
ಇದರ ಮಧ್ಯ ಹುಡಗಿನ ತರೋ ಉದ್ದೇಶ ಖಂಡಿತ ನನಗೆ ಇರ್ಲಿಲ್ಲ...
ಆದರೆ ಹೆಣ್ಣೇ ಹಾಗೆ.
ಕುಡುಕರ ಪಾಲಿಗೆ ನಶೆ, ಮಕ್ಕಳಪಾಲಿಗೆ ತಾಯಿ, ಗೃಹಸ್ಠನ ಪಾಲಿಗೆ ಗೃಹಲಕ್ಷ್ಮಿ, ಸರ್ವಸಂಗ ಪರಿತ್ಯಾಗಿಯ ಪಾಲಿಗೆ ಜಗನ್ಮಾತೆ ಜಗದೋದ್ಧಾರಿಣಿ.
ಹೆಣ್ಣಿಗಿರೋ ವೈಶಿಷ್ಟ್ಯ ಗಂಡಿಗಿಲ್ಲಾ ಬಿಡು.

Gururaja Narayana said...

ನಮಸ್ಕಾರ ಸಿದ್ದಾರ್ಥ, ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು