Monday, March 17, 2008

ಬಿಡಿಸೋ ಸಿಗ್ನಲನು... ಮಾಮ.


ಅಬ್ಬಬ್ಬಾ... ಏನ್ ಟ್ರಾಫಿಕ್ ರೀ ಬೆಂಗ್ಳೂರು! ನಗರ ಬೆಳೀತಾ ಇದೆ ಅನ್ನೋದರ ಸಂಕೇತ ಇರ್ಬೇಕು. ಯಾವ ರೋಡ್ ನೋಡೀ ಜಾಮ್. ಯಾವ ಸಿಗ್ನಲ್ ನೋಡೀ ಬ್ಯುಸಿ. ಓಟ್ನಲ್ಲಿ ಇಲ್ಲಿನ ಜನರಿಗೆ ತಮ್ಮ ಜೀವನದ ಮೂರನೇ ಒಂದು ಭಾಗ ನಿದ್ದೆ, ಮೂರನೇ ಒಂದು ಭಾಗ ಕೆಲಸ ಆದ್ರೆ ಉಳಿದ ಭಾಗ ಟ್ರಾಫಿಕ್‌ಗೇ ಮೀಸಲು. ಊಟ ಶೌಚಕ್ಕೆ ಏನ್ರೀ ಗತಿ ಅಂತ ಮಾತ್ರ ಕೇಳ್ಬೇಡಿ. ಇದಕ್ಕೆಲ್ಲಾ ಯಾರು ಹೊಣೆ? ಸರ್ಕಾರಾನ? ಟ್ರಾಫಿಕ್ ಪೋಲೀಸ್ರಾ? ಅಥವಾ ನಮ್ಮ ಬೆಂಗ್ಳೂರಿನ infrastructureಆ??? ಯಾರಿಗೆ ಗೊತ್ತು ಬಿಡಿ. ಆದ್ರೆ ನಮ್ಮ ಎದ್ರಿಗೆ ಇದನ್ನೆಲ್ಲಾ ಮ್ಯಾನೇಜ್ ಮಾಡ್ತಿರೋದು ನಮ್ಮ (ಟ್ರಾಫಿಕ್) ಪೋಲೀಸ್ ಮಾಮ. ಅದಕ್ಕೆ ಈ ಕಷ್ಟ ಪರಿಹರಿಸ್ಲಿಕ್ಕೆ ಅವ್ನಿಗೇ ಮೊರೆ ಇಡ್ತಾ ಇದೀನಿ... (ಎರಡು ಕನಸು ಚಿತ್ರದ "ಪೂಜಿಸಲೆಂದೇ ಹೂಗಳ ತಂದೆ" ಧಾಟೀಲಿ)



ತೂರಿಸಲೆಂದೇ ಬೈಕಲಿ ಬಂದೆ
ಟ್ರಾಫಿಕ್ ಜಾಮಲಿ ನಾನೊಂದೆ
ಬಿಡಿಸೋ ಸಿಗ್ನಲನು ಮಾಮ
ಬಿಡಿಸೋ ಸಿಗ್ನಲನು ಮಾಮ

ಬೆಂಗ್ಳೂರ್ ನಗರದಿ ಜಾಮಿನ ಜೋರು
ರೋಡಿನ ಮೇಲ್ಗಡೆ ಕಾರ್‌ಗಳ ತೇರು
ಜಾಗವು ಸಿಕ್ಕೆಡೆ ಬೈಕನು ತೂರು
ಶುರುವಾಗಿದೆ ವಾರು ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ನಗರದಿ ಫುಡಾರಿ ಬಂದಿಳಿದಿಹನು
ಜನರಿಗೆ ಟ್ರಾಫಿಕ್ ಜಾಮ್ ತಂದಿಹನು
ಜಾಮನು ನೆಕ್ಕುತ ಆಗಿದೆ ಬೋರು
ಕರುಣೆಯ ತೋರಿನ್ನು ಚೂರು
ಬಿಡಿಸೋ ಸಿಗ್ನಲನು ಮಾಮ

ಬೇಗನೆ ಸಾಗುವ ಭರದಲಿ ಕಾರು
ಪಕ್ಕದ ಕಾರಿಗೆ ಉಜ್ಜಿತು ನೋಡು
ಜಗಳವ ಆಡುತ ಮೈ ಮರೆತಿಹರು
ದಯಮಾಡಿಸೊ ಇಲ್ಲಿ ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ಎದುರಲಿ ಆಟೋ ಸಾಗುತಲಿಹುದು
ಒಮ್ಮೆಲೆ ಗಿರಕಿಯ ಹೊಡೆಯುತಲಿಹುದು
ಶಿವ ಶಿವ ಎನ್ನುತ ಜನ ಹೆದರಿಹರು
ಓಡಿಸೋ ಭೂತವನು ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ಬೇಸಿಗೆ ಬಿಸಿಲನು ತಾಳದೆ ನಾನು
ಹೆಲ್ಮೆಟ್ ತೊಡದಿರೆ ಹಾಕಿದೆ ಫೈನು
ಆದರೆ ರಿಸಿಟನು ಕೊಡದೆಯೆ ನೀನು
ಕಳಿಸುವೆಯೇಕೆನ್ನ ಸ್ವಾಮಿ
ಬಿಡಿಸೋ ಸಿಗ್ನಲನು ಮಾಮ

ಸಿಗ್ನಲ್ ಜಂಪನು ಮಾಡಿದ ಪೆದ್ದನು
ನಿನ್ನಯ ಜಾಲಕೆ ಸಿಕ್ಕಿಬಿದ್ದಹನು
ಬೇಗನೆ ಮುಗಿಸಿ ನೆಗೋಸಿಯೇಷನ್
ಪಡೆದುಕೊಳೋ ನಿನ್ನ ಕಮೀಷನ್
ಬಿಡಿಸೋ ಸಿಗ್ನಲನು ಮಾಮ

9 comments:

Karna Natikar said...

simply superbbbb

ದೀಪಕ said...

ನಮಸ್ಕಾರ/\:)

'ರೀಮಿಕ್ಸ್ ರಾಜ' ಸಿದ್ಧಾರ್ಥನಿಗೆ ಜಯವಾಗಲಿ :)

ಇ೦ತಿ,

ದೀಪಕ

ವಿಜಯ್ ಶೀಲವಂತರ said...

Sakkattagide.... :)

ಸಿದ್ಧಾರ್ಥ said...

@ಕರ್ಣ,ದೀಪಕ,ವಿಜಯ
ತುಂಬಾ ಧನ್ಯವಾದಗಳು... ಹೀಗೇ ಬಂದು ಹೋಗುತ್ತಿರಿ.

C.A.Gundapi said...

Vodalu ende Blogige bande :)
Khushi aayithu Vodi ..

Keep going :)

Anonymous said...

ಸಕ್ಕತ್ತಾಗಿದೆ.

ಸಿದ್ಧಾರ್ಥ said...

@gundapi
thanks maga

@chakora
ನಿಮ್ಮ ಶಹಭಾಸ್‌ಗಿರಿ ಪಡೆದುದೇ ನನ್ನ ಹೆಮ್ಮೆ.
ತುಂಬಾ ಧನ್ಯವಾದಗಳು... ಹೀಗೇ ಬಂದು ಹೋಗುತ್ತಿರಿ.

Srinidhi said...

ha ha ha :-)

ಸಿದ್ಧಾರ್ಥ said...

@ಶ್ರೀನಿಧಿ
ನಗುವ ಕೇಳುತ ನಗುವುದತಿಶಯದ ಧರ್ಮ... ಹಾ ಹಾ :-)