
ಈ ಐಟಿ ಇಂಡಸ್ಟ್ರಿ ತನ್ನ ಶ್ರೇಯಸ್ಸಿನ ತುತ್ತತುದಿಯಲ್ಲಿದ್ದಾಗ ಮದುವೆ ಫಿಕ್ಸ್ ಆಗಿ ಮುಹೂರ್ತಕ್ಕೆ ಸ್ವಲ್ಪ ವಿಳಂಬವಾಗಿ ಈಗ ಮದುವೆಯಾಗುತ್ತಿರುವ ಹೆಣ್ಣುಮಕ್ಕಳ ಪರಿಸ್ಥಿತಿ ನೋಡಿದರೆ ನನಗೆ ಯಾಕೋ ಅಯ್ಯೋ ಪಾಪ ಅನ್ನಿಸುತ್ತಿದೆ. ಅದರಲ್ಲೂ ಮದುವೆ ಆಗುವ ಗಂಡು ಸತ್ಯಂನಲ್ಲಿ ಕೆಲಸಮಾಡುತ್ತಿದ್ದರೆ ಅವಳ ದುಃಖಕ್ಕೆ ಎಣೆಯಿದೆಯೆ? ಬಹಶಃ ಅಂಥಾ ಹೆಣ್ಣುಮಕ್ಕಳೆಲ್ಲ ಕುಳಿತು ಹೀಗೆ ಶಿವನ ಹತ್ತಿರ ಮೊರೆಯಿಡುತ್ತಿರಬಹುದು...
ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ
ಐಟಿಯವನ ವರಿಸಲಾರೆ ಕಾಪಾಡಯಾ ಹರನೇ
ಐಟಿಯವನು ಎಂದು ಮೊದಲು ಭ್ರಮಿತಗೊಂಡೆ ನಾ
ಕೈ ತುಂಬಾ ಸಂಬಳ ತರುವ ಎಂದುಕೊಂಡೆ ನಾ
ಕಾಫಿಡೇಗೆ ಬಾ ಎನ್ನಲು ಮುಗಿಲ ನೋಡಿದಾ
ರಿಸೆಷನ್ನು ಸಂಬಳ ಕಡಿತಾ ಏನೊ ಹೇಳಿದಾ
ಕೊನೆಗೆ ವರ್ಷದ ಬೋನಸ್ ಕೂಡಾ ಇಲ್ಲವೆನ್ನುತಾ
ಕೆಲಸ ಹೋಗಿಲ್ಲ ಸಧ್ಯ ಎಂದು ಅರುಹಿದಾ
ಸಿನೆಮಾಗೆ ಕರೆದರೆ ಏನೊ ನೆಪವ ಹೇಳಿದಾ
ಟೆಕೆಟನ್ನು ತೆಗೆದಾಗಿದೆ ಎನ್ನಲು ಬರಲು ಒಪ್ಪಿದಾ
ಪಾಪ್ ಕಾರ್ನು ನಿನ್ನಯ ದೇಹಕೆ ಒಗ್ಗದೆನ್ನುತಾ
ಎರಡು ರೂಪಾಯಿಯ ಲಾಲಿ ಪಪ್ಪು ಕೊಡಿಸಿದಾ
ರಾತ್ರಿ ಕಾಲ್ ಮಾಡು ಎಂದರೆ ಮಿಸ್ಕಾಲ್ ನೀಡಿದಾ
ನಾನೇ ಕಾಲ್ ಮಾಡಿದ ಮೇಲೆ ಬ್ಲೇಡು ಹಾಕಿದಾ
ಮದುವೆಯಾದ ಮೇಲೆ ಹನಿಮೂನ್ ಬಗ್ಗೆ ಹೇಳುತಾ
ನಂದಿಬೆಟ್ಟವೆ ಸುಂದರ ತಾಣ ಎನ್ನತೊಡಗಿದಾ
ಅಪಾರ್ಟ್‌ಮೆಂಟು ಸೈಟು ಎಲ್ಲಾ ಮರೆತು ಹೋಗಿದೆ
ಚಿಕ್ಕದಾದ ಬಾಡಿಗೆ ಮನೆಯೇ ಸಾಕು ಎನಿಸಿದೆ
ಇಲ್ಲಿರುವುದು ಸುಮ್ಮನೆ ಅಲ್ಲಿ ನಮ್ಮನೆಯೊಂದಿದೆ
ಎನ್ನುವ ವೇದಾಂತದ ಮಾತೇ ಆಸ್ತಿಯಾಗಿದೆ
ಶಿವಪ್ಪಾ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ
ಐಟಿಯವನ ವರಿಸಲಾರೆ ಕಾಪಾಡಯಾ ಹರನೇ
11 comments:
Mast baradde.Mast arta madkandigidyalo egin kaalad hudgirnaaaa....
cholo aitapa ninna lekhana. andara naavu 2-3 ekare hola khareedi maade hennu nodaak hogbeku andhanga aatu. :))
Sidda Sadya namma maduve aagide bidappa :)
@Poornima
Matte artha maadkalakaatale...
@Vijay
Hoon saar... bega jameen tagondbidi
@Gundapi
Houdu... illa andre naavu aajanma brahmachaari aagbidtidvi.
ಮೊದಲು.
ಎಲ್ಲಾ ಹುಡುಗಿಯರಿಗೂ ಬೇಕು
Software ಗಂಡ
ಇದೇನಿದು...
Software ಗಂಡಾ..?
ಈಗ
ಎಲ್ಲಾ ಹುಡುಗಿಯರಿಗೆ ಬೇಕು
ದುಡಿಯುವ ಗಂಡ
only software ಆಗಿದ್ರೆ
ಬರೀ ದಂಡ
@Giri
ಸಕತ್ತಾಗಿದೆ ಸಾರ್ ಚುಟುಕುಗಳು.
ಇಲ್ಲಿ ಬಂದು ಚುಟಿಕಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ಚೆನ್ನಾಗಿದೆ..ಸರ್
Hey! very nice...
nimma blog open maadi nodiddakke sarthakaa aatu....
appropriate title too.
Keep it up.
ಆದ್ರೆ ಒಂದು ಮಾತ್ರ ನಿಜ "Recession hits harder - Discounts get bigger" ಅದಕ್ಕೆ ಇನ್ನು ಕಾಲ ಜಾಸ್ತಿ ಕೆಟ್ಟಿಲ್ಲ ಬಿಡು ಸಿದ್ಧಾ...ಪಾಪ ಮಿರ್ಜಿ ನೋಡಿದ್ರೆ ಹೆದ್ರಕೊತಾನೆ....
@Pramod
ಧನ್ಯವಾದಗಳು ಸಾರ್... ಹೀಗೇ ಬಂದು ಹೋಗುತ್ತಿರಿ.
@Veena
ಸಾರ್ಥಕತೆ ಬರೋದು ನಿಮ್ಮಂಥವರು ಓದಿ ಖುಷಿಪಟ್ಟಾಗ.
ತುಂಬಾ ಧನ್ಯವಾದಗಳು. ಹೀಗೇ ಬಂದು ಹೋಗುತ್ತಿರಿ
@ಆನಂದ್
:) ಹೂಂ.. ಮಿರ್ಜಿಗೆ ನೋಡಕ್ ಹೇಳ್ಬ್ಯಾಡ. ಈ ಯುಗಾದಿಗೇ ಮದ್ವಿ ಆಗ್ಬೇಕು ಅಂತ ಹಟ ಹಿಡದ್ರೂ ಹಿಡದ್ನಾ...
Eeeedu houdu...
entakke andre nanage recent aagi maduve fix aatala.. recession start aadamele...so market survey aaaju...
But Ondu vichara eeddu... eega software hudgeerna, software/hardware/managemnt/other hudugaru maduve aagta eelle... ottinalli software ge maduve yoga kadime aaju... ena helte???
Post a Comment