
ನಮ್ಮ ಮಾಜಿ ಮುಖ್ಯಮಂತ್ರಿಗಳನ್ನ ಟಿವಿಲಿ ನೋಡದಾಗಲೆಲ್ಲ ನನಗೆ ಅಯ್ಯೋ ಅನ್ಸತ್ತೆ. ಯಾಕೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ಮನುಷ್ಯ, ಹೋರಾಟಗಾರನಾಗಿ, ರಾಜಕಾರಣಿಯಾಗಿ, ಮುಖ್ಯಮಂತ್ರಿಯಾಗಿ, ಮಾಡಬಾರದ್ದನ್ನೆಲ್ಲ ಮಾಡಿ, ಲೋಕಾಯುಕ್ತರ ಬಲೆಗೆ ಬಿದ್ದು, ಹೈ ಕಮಾಂಡ್‌ನಿಂದ ಬೈಸಿಕೊಂಡು, ಅಧಿಕಾರ ಬಿಟ್ಟು, ಜೈಲಿಗೂ ಹೋಗಿ, ಅಸ್ಪತ್ರೆಗೂ ತಿರುಗಿ, ಜಾಮೀನು ತೆಗೆದುಕೊಂಡು ಮತ್ತೆ ಅಧಿಕಾರ ಬೇಕು ಎಂದು ಹಂಬಲಿಸುತ್ತಿರುವುದನ್ನು ನೋಡಿದರೆ, ಒಬ್ಬ ಮನುಷ್ಯನ ಕಾಲಚಕ್ರ ಓಳ್ಳೆ ಸೈನ್ ವೇವ್ ಥರಾ ಆಗೋಯ್ತಲ್ಲಾ ಅಂತ ಪಾಪ ಅನ್ಸತ್ತೆ! ಮುಂದೇನಾಗ್ಬಹುದು ಅಂತೀರಿ? ಯಾವನಿಗ್ ಗೊತ್ತು ಅಲ್ವಾ? ಅವ್ರಿಗೂ ಗೊತ್ತಿಲ್ಲ. ಬಹುಷಃ ಅವ್ರು ಮನೆಲ್ ಕೂತು, ಟಿವಿ ನೋಡ್ತಾ, ಹೀಗ್ ಹಾಡ್ತಿರ್‌ಬಹುದು...
ಏನು ಮಾಡೋದು ಜುಜಬಿ ಕೇಸೊಂದು
ತಗ್ಲಾಕ್ಕೊಂಡ್ ಬಿಡ್ತು
ತಗ್ಲಾಕ್ಕೊಂಡ್ ಬಿಡ್ತು
ಮಂತ್ರಿ ಆಗ್ತೀನಾ ಚೊಂಬೇ ಗತಿನಾ
ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಖುರ್ಚಿಯ ಮೇಲೇ ಕುಂತಾಗ ಹಿಂದೆ ಮುಳ್ಳು ಒಂದು
ಚುಚ್‌ದಾಂಗ್ ಆಯ್ತು
ಮುಳ್ಳು ನನ್ನನ್ನೇ ಯಾಕೆ ಚುಚ್‌ಬಿಡ್ತೋ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮತ್ತೆ ಕೂರ್ತೀನಾ ನಿಂತೇ ಇರ್ತೀನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಅದು ಯಾವ್ದೋ ಒಂದು ಲ್ಯಾಂಡು ಪೇಪರ್‌ನಾ
ಕಣ್ ಮುಚ್ಕೊಂಡ್ ಮಾಡಿ ಬಿಟ್ಟೆ ಸೈನನ್ನಾ
ಎಣಿಸುತ್ತಾ ಕೂತೆ ಕೋಟಿ ಕೋಟಿ ನಾ
ಲೋಕಾಯುಕ್ತಾ ಮಾಡ್ತು ರೇಡನ್ನಾ
ಮತ್ತೇ ಮತ್ತೇ ಹೇಳ್ದೆ ನಾನ್ ನಿರ್ದೋಷಿ ಕಣ್ರೀ
ಆದ್ರೇ ಮೇಲಿನ್ ದಡ್ರು ನನ್ ನಂಬ್ಲಿಲ್ಲಾ ಕಣ್ರೀ
ನನ್ನನ್ನಾ ನೋಡಿ ಉರ್‌ಕೊಳ್ಳೋ ಜನರು
ಮಾಟ ಮಂತ್ರಾ ಮಾಡಿಸ್‌ಬಿಟ್ರು
ಇಂಥಾ ಟೈಮಲ್ಲಿ ಜಿದ್ದು ಬೇಕಿತ್ತಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂಜುನಾಥಾನೇ ಕೋಪಿಸ್ಕೊಂಡ್ ಬಿಟ್ಟಿದ್ನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಪರಪ್ಪನ್ ಅಗ್ರಹಾರ ಸರಿ ಇಲ್ಲಾ
ಎದೆ ನೋವು ಯಾಕೋ ಜಾಸ್ತಿ ಆಯ್ತಲ್ಲಾ
ಆಸ್ಪತ್ರೆಗೂ ಹೋಗಿ ಕುಂತ್ನಲ್ಲಾ
ನಾನೇನಂದ್ರು ಜಡ್ಜು ನಂಬ್ತಿಲ್ಲಾ
ಶೋಭಕ್ಕಂಗೆ ಹೇಳಿ ಪೂಜೇ ಮಾಡ್‌ಸ್ದೆ ಕಣ್ರೀ
ತುಂಬಾ ಒಳ್ಳೆ ರೆಸಲ್ಟ್ ಬಂದೇ ಬಿಡ್ತು ನೋಡ್ರಿ
ಜಡ್ಜು ನನ್ನನ್ನಾ ನೋಡಿದ ಕೂಡ್ಲೇ
ಜಾಮೀನು ಕೊಟ್ಟು ಕಳ್ಸೇ ಬಿಟ್ರು
ಮುಂದೆ ಬೆಂಗ್ಳೂರಾ ಇಲ್ಲಾ ದಿಲ್ಲಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
ಮಂತ್ರಿ ಆಗ್ತೀನಾ ಚೊಂಬೇ ಗತಿನಾ ಯಾವನಿಗ್ ಗೊತ್ತು
ಯಾವನಿಗ್ ಗೊತ್ತು
8 comments:
ಸಿದ್ಧಾರ್ಥ,
ಮಾ.ಮು.ರ ಭವಿಷ್ಯ ಯಾವನಿಗ್ಗೊತ್ತು? ಆದರೆ ನಿಮ್ಮ ಹಾಡು ಮಾತ್ರ ತುಂಬ ಚೆನ್ನಾಗಿದೆ,ಕಣ್ರೀ! ಕಾರ್ಟೂನು ಸಹ ಚೆನ್ನಾಗಿದೆ. ಅದನ್ನೂ ನೀವೇ ತೆಗೆದಿದ್ದಾ?
ಭಟ್ರೇ,
ರೀಮಿಕ್ಸಾಯಣ ಬೋ ಪಸ೦ದಾಗೈತೆ..
ಒ೦ದ್ ಕಿತ ಯೋಚ್ಸಿ ನೀವು ಪಿಕ್ಚರ್ಗೆ ಹಾಡ್ ಬರೀರಲ್ಲ !
ಜನ ಶ್ಯಾನೆ ಇಷ್ಟಪಡ್ತಾರೆ.
ಸಿವ ನಿಮ್ಮನ್ನ ಸ೦ದಾಕಿಟ್ಟಿರ್ಲಿ.
- ದೀಪಕ
'ಮನದನಿ' ಬ್ಲಾಗಿನಲ್ಲಿ ಲೇಖನಗಳ ಅರ್ಧ ಶತಕ ಬಾರಿಸಿದ್ದಕ್ಕೆ ಅಭಿನ೦ದನೆಗಳು ಭಟ್ರೆ.
ಆದಷ್ಟು ಬೇಗ ಶತಕ ಬಾರಿಸುವ೦ತವರಾಗಿ :)
- ದೀಪಕ
@sunaath
ಧನ್ಯವಾದಗಳು ಸಾರ್.. ಕಾರ್ಟೂನು ನಂದಲ್ಲ.. ಇಂಟರ್‌ನೆಟ್ ಅಲ್ಲಿ ಸಿಕ್ಕಿದ್ದು.
@Deepak
ತುಂಬಾ ತುಂಬಾ ಟ್ಯಾಂಕ್ಸ್.. :)
ಭಲೇ ಸಿದ್ಧಾರ್ಥ! ಹಾಡು ಅಂದರೆ ಹಿಂಗಿರಬೇಕು...
@Prakash
ಧನ್ಯವಾದಗಳು... ಬರ್ತಾ ಇರಿ...
Good one. Nice Remix
Tumba Chennagide sir nimma Remix song..
Post a Comment