
ನಾನು ಮದುವೆ ಆಗಬೇಕಾದರೆ ಇವಳ ಮನೆಗೆ ಹೋಗಿದ್ದು. ಆಗ ಸಾಲ್ಕಣಿಗೆ ಹೋಗುವ ದಾರಿಯಿಂದ ಬಲಕ್ಕೆ ತಿರುಗಿ, ಅರ್ಧ ಕಿಲೋಮೀಟರ್ ಸ್ವಲ್ಪ ಡಾಂಬರ್ ಕಂಡಿರುವ ರಸ್ತೆ ಮತ್ತರ್ಧ ಮಣ್ಣುರಸ್ತೆಯಲ್ಲಿ ಹಕ್ರೆಮನೆಗೆ ಹೋಗಬೇಕಾಗಿತ್ತು. ಈ ಮಣ್ಣುರಸ್ತೆಯನ್ನು ಡಂಬರೀಕರಣ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ನಮ್ಮ ಮದುವೆ ಆಗಿ, ಮೂರು ವರ್ಷಗಳೇ ಕಳೆದು ನಮಗೆ ಪ್ರಮೋಷನ್ ಬೇರೇ ಸಿಕ್ಕು, ಇವಳ ಬಾಳಂತನಕ್ಕೆ ಊರಿಗೆ ಕಳಿಸಿಯೂ ಆಯಿತು. ಮಗರಾಯನ ಮುಖ ನೋಡಲು ಆಗಾಗ ಅಲ್ಲಿಗೆ ಹೋಗಬೇಕಾದುದರಿಂದ ಈ ಸಮಸ್ಯೆ ಸ್ವಲ್ಪ ಜಾಸ್ತಿಯೇ ಕಾಡುತ್ತಿದೆ! ಸುಮ್ಮನೇ ಮಣ್ಣುರಸ್ತೆಯನ್ನು ಹಾಗೆಯೇ ಬಿಟ್ಟುಬಿಟ್ಟಿದ್ದರೇ ಚೆನ್ನಾಗಿತ್ತೋ ಏನೋ. ಡಾಂಬರ್ ಹಾಕ್ತೀವಿ ಎಂದು ಹೇಳಿ ಊರಿನ ಜನರ ಕಿವಿಯಮೇಲೆ ದಾಸವಾಳವನ್ನು ಕೂರಿಸುವ ಕೆಲಸ ಮಾಡಿಬಿಟ್ಟಿದ್ದಾರೆ! ಈ ಡಾಂಬರ್ ಹಾಕುವ ಸಂಭ್ರಮ ಬಹುಷಃ ನಮ್ಮ ಜೀವಮಾನದಲ್ಲಿ ಮುಗಿಯುತ್ತದೆ ಎಂದು ಹೇಳಲಾಗುವುದಿಲ್ಲ.
ಕಲ್ಲು ತಂದು ಹಾಕಿ ಒಂದು ವಾರ ಮತ್ತೆ ತಲೆ ಹಾಕದೇ ಇರುವುದು. ಜನ ಕಷ್ಟಪಟ್ಟು ಸರ್ಕಸ್ ಮಾಡುತ್ತಾ ಓಡಾಡುವುದು. ಕಲ್ಲುಗಳಲ್ಲಿ ಅರ್ಧ ಗಟಾರಕ್ಕೆ ಸೇರಿ ಗಟಾರ ಯಾವುದು, ರಸ್ತೆ ಯಾವುದು ಎಂದು ಪತ್ತೆಯೇ ಆಗದಿರುವುದು. ಮತ್ತೆ ಇವರು ಬಂದು ಮತ್ತೆ ಕಲ್ಲು ಹಾಕಿ ಹೋಗುವುದು. ಇದೇ ಆಗಿಹೊಗಿದೆ! ಕಳೆದಸಲ ಅದರ ಮೇಲೆ ಒಂದಿಷ್ಟು ಮಣ್ಣನ್ನೂ ಸುರಿದು ಹೋಗಿಬಿಟ್ಟರು. ಊರಿಗೆ ಬಂದವರೆಲ್ಲಾ ಕೆಂಪು ಕೆಂಪು! ದಾರಿಯ ಪಕ್ಕದಲ್ಲಿರುವುದೆಲ್ಲಾ ಕೆಂಪು ಎಲೆಗಳ ಗಿಡಗಳು! ನಾನು ಮನೆಯಿಂದ ಕಾರು ತೆಗೆದುಕೊಂಡು ಅಲ್ಲಿಗೆ ಹೋದರೆ, ಮನೆಗೆ ಬರುವಾಗ ನನ್ನ ತಂದೆ ಒಂದು ಬಕೆಟ್ ನೀರು ಹಿಡಿದುಕೊಂಡು ಬಾಗಿಲಲ್ಲೇ ಕಾಯುತ್ತಿರುತ್ತಾರೆ!
ಒಂದು ರಸ್ತೆ ಡಾಂಬರೀಕರಣಕ್ಕೆ ನಮ್ಮ ಸರಕಾರಕ್ಕೆ ಎಷ್ಟು ಸಮಯ ಬೇಕು? ಒಂದು ವರ್ಷ? ಎರಡು ವರ್ಷ? ಮೂರು ವರ್ಷ? ಅಲ್ಲಾ ಸ್ವಾಮಿ ನೀವು ಐದು ವರ್ಷ ಬರೀ ಜಲ್ಲಿ ಕಲ್ಲು ಹಾಕಿಸಿ ಹೋದರೆ, ಮುಂದಿನ ಸರಕಾರ ಮತ್ತೆ ಇದನ್ನೇ ಮಾಡುವುದಿಲ್ಲವೆ? ಒಟ್ಟಿನಲ್ಲಿ ತಮ್ಮ ಖುರ್ಚಿ ಭದ್ರ ಮಾಡಿಕೊಳ್ಳುವುದೇ ಸರಕಾರದ ಸಾಧನೆಯಾಗುತ್ತಿರುವ ಈ ಕಾಲದಲ್ಲಿ ಎಲ್ಲಿ ಡಾಂಬರ್ ಹಾಕಬೇಕು ಎನ್ನುವುದೆಲ್ಲಾ ಯಾರಿಗೆ ಬೇಕಾಗಿದೆ? ಇಂಥಹದೇ ಸರಕಾರಗಳು ಮತ್ತೆ ಮತ್ತೆ ಬರುತ್ತಿದ್ದರೆ ಬಹುಷಃ ನನ್ನ ಮುಪ್ಪಿನಕಾಲದಲ್ಲಿ ನಾನು ನಕ್ಸಲೈಟ್ ಆದರೆ ಆಶ್ಚರ್ಯವಿಲ್ಲ.
ಈ ಹೊಂಡ ಹಾರುವಿಕೆಯಿಂದ ಬೇಸತ್ತು, ಈ ಬಾರಿ ಹೋಗುವಾಗ ಹಾಡುತ್ತಾ ಹೋಗಬೇಕು ಎಂದು ಒಂದು ರೀಮಿಕ್ಸ್ ರಚಿಸಿದ್ದೇನೆ. ಮುಂಗಾರು ಮಳೆಯ "ಕುಣಿದು ಕುಣಿದು ಬಾರೆ" ಇಂದ ಸ್ಫೂರ್ತಿಗೊಂಡು!
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಕುಣಿದು ಕುಣಿದು ಬನ್ನಿ
ಜಿಗಿದು ಜಿಗಿದು ಬನ್ನಿ
ಬರುವಾ ನಿಮ್ಮ ಜೊತೆಗೆ
ಅಮೃತಾಂಜನ್ ತನ್ನಿ
ರೋಡಲಿ ಹೊಂಡಾ ಕಂಡವರೇ
ಗಟಾರದಲ್ಲಿ ಇಳ್ಕೊಂಡ್ ಬನ್ನಿ
ರೋಡೇ ಮಾಯ
ನಮ್ಮೂರ್ ರೋಡೇ ಮಾಯ
ರೋಡಲಿ ಬೈಕು ಹೊಡೆಯಲು ಹೋಗಿ
ಮೈ ಕೈ ಗಾಯ
ಜಲ್ಲಿ ಕಲ್ಲು ಹಾಕಿ
ಮೇಲೆ ಮಣ್ಣು ಹಾಕಿ
ಡಾಂಬರ್‌ಗಾಗಿ ಕಾಯುತ ಕುಳಿತು
ಮಳೆಯಲಿ ಎಲ್ಲಾ ಕೊಚ್ಕೊಂಡ್ ಹೋಯ್ತು
ರೋಡೇ ಮಾಯ!
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಹೊಂಡಾ ರಿ ಹೊಂಡಾ ರಿ ಹೊಂಡಾ ಹೊಂಡಾ
ಈ ಸಲ ಹಾಡಿಕೊಂಡು ಹೋಗುವಾಗ ದಾರಿ ಚಿಕ್ಕದಾಗುತ್ತದೋ ನೋಡಬೇಕು!
9 comments:
ಭಟ್ರೇ,
ಚೆನ್ನಾಗಿದೆ. ರೀಮಿಕ್ಸ್ ಹಾಡುಗಳ ಒ೦ದು ಪುಸ್ತಕ ಮಾಡಿ.
ಒಳ್ಳೇ ಹೋಗುತ್ತೇ :)
- ದೀಪಕ
:)>>>:)
ಸಿದ್ಧಾರ್ಥ,ಒಳ್ಳೇ ಕವನ ರಚಿಸಿದ್ದೀರಿ. ಈ ಸ್ಫೂರ್ತಿಗೆ ಕಾರಣ?
"ಮಾವನ ಮನೆಗೆ ಹೋಗುವ ದಾರಿ
ನಿಮ್ಮನ್ನ ಕವಿಯಾಗಿಸಿದೆ, ಅಲ್ವೇನ್ರೀ!"
@ದೀಪಕ
ಕುವೆಂಪು ಬರ್ದಿರೋ ಹಾಡುಗಳೇ ಓಡ್ತಿಲ್ಲ... ಜನರಿಗೆ ಈಗ ಬರೀ ಶೀಲಾ.. ಮುನ್ನಿ.. ಬೇಕಾಗಿದಾರೆ ಅಷ್ಟೇ :)
@ಚುಕ್ಕಿಚಿತ್ತಾರ
:)
@ಸುನಾಥ
ಸಧ್ಯ ಕಪಿ ಮಾಡದಿದ್ದರೆ ಸಾಕು :)
ಎಲ್ಲರಿಗೂ ಧನ್ಯವಾದ.. ಬರ್ತಾ ಇರಿ.
ಸಾಫ್ಟ್ವೇರ್ ಇಂಜಿನಿಯರ್ ಆಗಿ ನಿನ್ನ ಒಳಗಿರುವ ಪ್ರತಿಭೆಯನ್ನು ವ್ಯರ್ಥ ಮಾದುತ್ತಿರುವೆಯಾ ಗೆಳೆಯ?
ಓಹ್... ನೆನಪಿಸ್ಬೇಡಾ... ದಯವಿಟ್ಟು ನೆನಪಿಸ್ಬೇಡಾ... :)
ಮಜಾ ಇದೆ ಕಣ್ರೀ ನಿಮ್ಮ ಹಾಡು.ಜೊತೆಗೆ ಪಾಡೂ.. :-)
Namaskara,
bhari chand bardiri nim oor bagge.
:-) ... its nice ...!!!
Post a Comment