Wednesday, August 13, 2008

ವಂದೇ ಮಾತರಂ


ಪೂರ್ತಿ ವಂದೇ ಮಾತರಂ ಹೇಳಿಬಿಟ್ಟರೆ ಮುಸಲ್ಮಾನ್ ಬಾಂಧವರಿಗೆ ನೋವಾಗಿಬಿಡುತ್ತದೆ ಎನ್ನುವುದಕ್ಕೋಸ್ಕರ ಕೇವಲ ಮೊದಲೆರಡು ಪ್ಯಾರಾಗಳನ್ನಷ್ಟೇ ಹೇಳಬೇಕೆಂದು ನಮ್ಮ ನೆಹರೂ ಸರ್ಕಾರ ಘೋಷಿಸಿಬಿಟ್ಟಿತ್ತು. ಆಗಿನಿಂದ ಕೇವಲ ಎರಡೇ ಎರಡು ಪ್ಯಾರಾಗಳನ್ನು ಹೇಳಿ ಹೇಳಿ ನಮ್ಮ ಹುಡುಗರಿಗೆ "ವಂದೇ ಮಾತರಂ" ಗೀತೆ ಇಷ್ಟೇ ಇದೆ ಎಂಬ ಕಲ್ಪನೆ ಬಂದುಬಿಟ್ಟಿದೆ. ಕೇವಲ ಪ್ರಾಕೃತಿಕ ವರ್ಣನೆಯಿರುವ ಈ ಸಾಲುಗಳಿಂದ ತಾಯ್ನಾಡಿಗೋಸ್ಕರ ಪ್ರಾಣವನ್ನೇ ಕೊಡಲು ಜನ ಹೇಗೆ ಸಿದ್ಧರಾದರೆಂದು ಕೆಲವರಿಗೆ ಅನಿಸಿರಲೂ ಬಹುದು. ಆದರೆ ಪೂರ್ತಿ ಹಾಡನ್ನು ಕೇಳಿದಾಗ ಎಂಥವನಲ್ಲಾದರೂ ದೇಶಪ್ರೇಮ ಉಕ್ಕಿಸುವಂಥಹ ಗೀತೆ "ವಂದೇ ಮಾತರಂ". ದೇಶದ ಮೇಲೆ ಪ್ರೀತಿಯೇ ಇರದ, ಕೇವಲ ತಾವು ತಮ್ಮವರು ತಮ್ಮ ಧರ್ಮ ಎನ್ನುವ ಕೆಲವರಿಗೋಸ್ಕರ ತಾಯಿಯನ್ನು "ತಾಯಿ, ನೀನು ಅಬಲೆಯಲ್ಲ. ಮಹಾನ್ ಶಕ್ತಿವಂತೆ. ಸಾಕ್ಷಾತ್ ಕಾಳಿಯೇ ನೀನು" ಎನ್ನುವ ಭಕ್ತಿಭರಿತ ಭಾವನೆಗಳು ಕೋಮುವಾದವಾಗಿಬಿಟ್ಟವು.

ಬಂಕಿಮಚಂದ್ರರ "ಆನಂದ ಮಠ"ದಿಂದ -

ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ!

ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ದ್ರುಮದುಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ,
ಸುಖದಾಂ ವರದಾಂ ಮಾತರಂ

ವಂದೇ ಮಾತರಂ

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ,
ಕೋಟಿ ಕೋಟಿ ಭುಜೈರ್ಧೃತಖರಕರವಾಲೇ
ಕೇ ಬೋಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲ ವಾರಿಣೀಂ ಮಾತರಂ!

ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ
ತ್ವಂ ಹೀ ಪ್ರಾಣಹ ಶರೀರೇ
ಬಾಹುತೇ ತುಮೀ ಮಾ ಶಕ್ತಿ, ಹೃದಯೇ ತುಮೀ ಮಾ ಭಕ್ತಿ
ತೊಮಾರಿ ಪ್ರತಿಮಾ ಗಡಿ ಮಂದಿರೇ ಮಂದಿರೇ

ತ್ವಂ ಹೀ ದುರ್ಗಾ ದಶ ಪ್ರಹರಣ ಧಾರಿಣೀ
ಕಮಲಾ ಕಮಲದಳ ವಿಹಾರಿಣೀ
ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!

ಶ್ಯಾಮಲಾಂ ಸರಳಾಂ ಸುಶ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ!
ವಂದೇ ಮಾತರಂ!

2 comments:

ದೀಪಕ said...

ನಮಸ್ಕಾರ/\:)

ಸ೦ಪೂರ್ಣ ’ವ೦ದೇ ಮಾತರ೦’ ಗೀತೆಯನ್ನು ನಿನ್ನ ಬ್ಲಾಗಿನಲ್ಲಿ ದಾಖಲಿಸಿ ಈ ಸ್ವಾತ೦ತ್ರ್ಯ ದಿನಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದೀಯ.
ಇ೦ತಹ ಅರ್ಥಪೂರ್ಣ ಗೀತೆಯನ್ನು ಮತಪೆಟ್ಟಿಗೆ ರಾಜಕೀಯಕ್ಕೋಸ್ಕರ ಮಟುಕುಗೊಳಿಸಿದ ಕಾರ್ಯ ಅರ್ಥಹೀನವಾದದ್ದು ಮತ್ತು ಖ೦ಡನೀಯವಾದದ್ದು.

ನಿನ್ನ ಬ್ಲಾಗಿನಲ್ಲಿ ಹೀಗೆಯೇ ದೇಶಭಕ್ತಿ ಗೀತೆಗಳು ದಾಖಲಾಗುತ್ತಿರಲೆ೦ದು ಹಾರೈಸುತ್ತೇನೆ.

ಇ೦ತಿ,

ದೀಪಕ

Vijay Bagalad said...

bale bale.. onde mataram poora illivargu gotte irlilla..