Tuesday, February 5, 2008

ಪ್ಯಾಂಟಿನ ಬಣ್ಣ

ಬ್ಯಾಚಲರ್ ಲೈಫ್ ಅಂದ್ರೇ ಹೀಗೆ ನೋಡಿ. ಒಂದು ವಾರದ ಮೇಲೆ ಆಗಿತ್ತು. ಬಟ್ಟೆ ಒಗೆಯುವ ಪ್ರೋಗ್ರಾಮ್ ಹಾಕಿ. ಆದರೆ ಮುಹೂರ್ತ ಮಾತ್ರ ಬಂದಿರಲಿಲ್ಲ. ಒಗೆಯದೆ ಇದ್ದ ಬಟ್ಟೆಗಳ ರಾಶಿ ಮಾತ್ರ ದೊಡ್ಡದಾಗುತ್ತಲೇ ಇತ್ತು. ಅಂತೂ ಇಂತೂ ಮೊನ್ನೆ ಶನಿವಾರ ಮುಹೂರ್ತ ಬಂತು. ಆದರೆ ಬಟ್ಟೆಗಳ ಸಂಖ್ಯೆ ಭಾರತೀಯರ ಜನಸಂಖ್ಯೆಯಂತೆ ಬೆಳೆದು ಹೋಗಿದ್ದರಿಂದ, ಪ್ಯಾಂಟು ಬೇರೆ ಶರ್ಟು ಬೇರೆ ನೆನೆಸಲು ಸಾಧ್ಯವಾಗಲಿಲ್ಲ. ಎಲ್ಲಾ ಒಟ್ಟಿಗೇ ಒಂದೇ ಬಕೆಟ್ಟಿನಲ್ಲಿ ಸ್ನಾನಕ್ಕೆ ಇಳಿದವು. ಒಂದರ ಮೇಲೆ ಇನ್ನೊಂದಕ್ಕೆ ಪ್ರೀತಿ ಉಕ್ಕಿತೋ ಏನೊ, ಪ್ಯಾಂಟು ತನ್ನ ಬಣ್ಣವನ್ನು ಬನಿಯನ್ನಿಗೆ, ಬನಿಯನ್ನು ತನ್ನ ಬಣ್ಣವನ್ನು ಪ್ಯಾಂಟಿಗೆ ವರ್ಗಾಯಿಸಿಬಿಟ್ಟಿದ್ದವು. ಪ್ರೇಮವೇ ಕವನಕ್ಕೆ ಸ್ಫೂರ್ತಿಯಲ್ಲವೆ. ಆ ಪ್ರೇಮ ನಮ್ಮದಾಗಲಿ ಬೇರೆಯವರದಾಗಲಿ ಅಥವಾ ನಾನು ಕಂಡ ಇಂಥ ನಿರ್ಜೀವ ವಸ್ತುಗಳದ್ದಾಗಲಿ. ಆ ಪ್ರೇಮದ ಸ್ಫೂರ್ತಿಯಲ್ಲಿ ಈ ರೀಮಿಕ್ಸ್ ಕವನ...

ಬಣ್ಣ
ನನ್ನ ಪ್ಯಾಂಟಿನ ಬಣ್ಣ
ನೀಲಿ ಜೀನ್ಸಿನ ಬಣ್ಣ
ನೀಲಿ ಜೀನ್ಸಿನ ಬಣ್ಣ

ನಾನು ಬಿಡಿಸಲು ಕೆಸರು
ಬಿಡುತಲೇದುಸಿರು
ತಿಕ್ಕಿದರೆ ಬಿಟ್ಟಿತು ಬಣ್ಣ
ಬಣ್ಣ ಬಣ್ಣ ಬಣ್ಣ ಬಣ್ಣ

ಈ ನೀಲಿ ಪ್ಯಾಂಟಿನ ಬಣ್ಣ ಒಗೆಯುವುದಕಿಂತ ಮುನ್ನ
ಅಣಕಿಸಿ ನಗುವ ಹಾಗೆ ಆ ನೀಲಿ ಆಗಸವನ್ನ
ನಾ ತಂದು ರಿನ್ ಪುಡಿಯನ್ನ ನೀರಲ್ಲಿ ಬೆರೆಸಿ ಅದನ
ಪ್ಯಾಂಟನ್ನು ಮುಳುಗಿಸಿದಾಗ ಬಕೆಟೆಲ್ಲ ಅದರದೆ ಬಣ್ಣ

ಬಾನಿನಿಂದ ಇಳಿದುಬಂದ ನೀಲಿ ತಾರೆಯು
ಮೈಯ ತೊಳೆದು ಬಣ್ಣವನ್ನು ಬಿಟ್ಟು ಹೋಯಿತು
ಮೇಲೆ ಕುಳಿತು ನೋಡುತಲಿ ಮಿಟುಕಿಸಿ ಕಣ್ಣ
ನಸು ನಗೆ ಬೀರುತಿದೆ ಎಲ್ಲಿಯದೀ ಬಣ್ಣ

ಹೋಗುವುದು ಎಂದರೆ ಹೊಲಸು ಹೋಗಿದ್ದು ಪ್ಯಾಂಟಿನ ಬಣ್ಣ
ಬಿಟ್ಟ ಮೇಲೆ ಆ ಪ್ಯಾಂಟನ್ನ ಮುತ್ತಿತ್ತು ಈ ಬನಿಯನ್ನ
ಬನಿಯನ್ನಿಗಿಂತ ಬಿಳುಪು ಈ ನನ್ನ ಪ್ಯಾಂಟಿನ ಬಣ್ಣ
ಬಿಳುಪಿದ್ದ ಬನಿಯನ್ ಎಲ್ಲಾ ಈಗಂತು ನೀಲಿ ಬಣ್ಣ

ಬನಿಯನ್ನಿನ ನೀಲಿ ಬಣ್ಣ ಬಿಡಿಸಲಾಗದು
ಪ್ಯಾಂಟಿನ ಬಿಳುಪು ಬನಿಯನ್ನನ್ನು ಹೋಲುತಿಹುದು
ಪ್ಯಾಂಟು ಮತ್ತು ಬನಿಯನ್ನಿನ ಪ್ರೇಮಗೀತವು
ಬಿಡಿಸಲಾರದ ಬಣ್ಣದಂತೆ ಅಮರವಾದವು

6 comments:

ದೀಪಕ said...

ನಮಸ್ಕಾರ/\:)

ಈಗಷ್ಟೇ 'ಬ೦ಧನ' ಚಿತ್ರದ 'ಬಣ್ಣ-ಬಣ್ಣ' ಹಾಡನ್ನು ಕೇಳಿ, ಮತ್ತೆ ನಿನ್ನ 'ರೀಮಿಕ್ಸ್' ಹಾಡನ್ನು ಅದಕ್ಕೆ ಹೊ೦ದಿಸಿ ಮನ:ದಲ್ಲಿ ಒಮ್ಮೆ ಹಾಡಿ ನೋಡಿದೆ.
ಒಳ್ಳೆ 'ರೀಮಿಕ್ಸ್' ಆಲ್ಬಮ್ ಕನ್ನಡದಲ್ಲಿ ಬಿಡುಗಡೆ ಮಾಡಬಹುದೇನೋ ಅ೦ತ ನನಗೆ ಅನ್ನಿಸಿತು :)

ಹೀಗೆಯೇ ಬ್ಲಾಗುದಾರಿಕೆ ಮು೦ದುವರೆಯಲಿ :)

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ

ಸಿದ್ಧಾರ್ಥ said...

@ದೀಪಕ
ಅನಿಸಿಕೆಗಳಿಗೆ ಧನ್ಯವಾದಗಳು. ರೀಮಿಕ್ಸ್ ಅಲ್ಬಮ್ ಮಾಡಬಹುದೇನೊ. ಹೇಗಿದ್ರೂ ಈಗೀಗ ರೀಮಿಕ್ಸ್ ಗಳದ್ದೇ ಹಾರಾಟ.

C.A.Gundapi said...

ಮಗಾ ಸುಪೀರ್ ಆಗಿ ಬರೆದಿದ್ದಿಯ .. ಹೀಗೆ ಮುಂದುವರಿಯಲಿ
Gundapi

ಸಿದ್ಧಾರ್ಥ said...

@Gundapi
ಥ್ಯಾಂಕ್ಸ್ ಮಗಾ...

Anonymous said...

ಆಹಾ ಏನ್ ರಿಮಿಕ್ಸ ಹಾಡು ಸೂಪರ್ ಸಿದ್ಧಾರ್ಥ...ಹೀಗೆ ಮುಂದುವರೆಯಲಿ ನಿನ್ನ ಕವಿತೆ,ಲೇಖನಗಳ ಸುರಿಮಳೆ...

ಸಿದ್ಧಾರ್ಥ said...

@vijay
ಧನ್ಯವಾದಗಳು...