Tuesday, February 8, 2011

ನಾವು ಕನ್ನdigaru - ೫

ನನಗೇ ಇಂಥವರು ಕಾಣುತ್ತಾರೋ ಅಥವಾ ನಾನೇ ಇಂಥವರನ್ನು ಹುಡುಕುತ್ತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಇಂತಹ ಘಟನೆಗಳು ಬೆಂಗಳೂರಿನಲ್ಲಂತೂ ಮಾಮೂಲು. ಹೊರಗಡೆ ಕನ್ನಡಿಗರು ಇಂಗ್ಲೀಷಿನಲ್ಲಿ ಮಾತನಾಡುವುದು ಸರ್ವೇ ಸಾಮಾನ್ಯವಾಗಿಹೋಗಿಬಿಟ್ಟಿದೆ! ಅಂತಹ ಘಟನೆಗಳಲ್ಲಿ ವಿಶೇಷತೆ ಏನೂ ಉಳಿದಿಲ್ಲ. ನಾನು ಅದಕ್ಕೆ ತಲೆಕೆಡಿಸಿಕೊಳ್ಳುತ್ತಲೂ ಇಲ್ಲ.

ಮೊನ್ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ಎಲ್ಲವೂ ಕನ್ನಡಮಯ! (ಎಂದು ನಾನೂ ಭಾವಿಸಿದ್ದೆ). ಅಂಗಡಿ-ಮುಂಗಟ್ಟುಗಳಲ್ಲೆಲ್ಲ ಕನ್ನಡ ಪುಸ್ತಕಗಳು, ಶುಭಾಶಯ ಪತ್ರಗಳು, ಕನ್ನಡ ಬರಹಗಳಿರುವ ಟೀ ಶರ್ಟ್‌ಗಳು ತುಂಬಿ ತುಳುಕುತ್ತಿತ್ತು. ಎಲ್ಲ ಕಡೆ ಕನ್ನಡದಲ್ಲೇ ಮಾತಾಡಿ ಎನ್ನುವ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಬೆಂಗಳೂರಿನಲ್ಲಿ ಇಷ್ಟೊಂದು ಜನ ಕನ್ನಡಾಭಿಮಾನಿಗಳು ಇದಾರಲ್ಲಾ ಎಂದು ಸಂತೋಷಪಡುತ್ತಿರುವಾಗಲೇ ನನ್ನ ಎದುರಿಗಿದ್ದ ಒಂದು ಹೆಣ್ಣು ಪಕ್ಕದಲ್ಲಿದ್ದ ತನ್ನ ಗೆಳತಿಗೆ ಹೇಳಿತು
"Hey.. I'll be just lookin at the T'shirts... ಆಯ್ತಾ..."

ಈ ಕೊನೆಯ "ಆಯ್ತಾ" ಬರದಿದ್ದರೆ, ನಾನು ಯಾರೋ ಉತ್ತರಭಾರತದವರು ಕನ್ನಡದಲ್ಲಿ ಆಸಕ್ತಿ ಹೊಂದಿ ಬಂದಿದ್ದಾರೆ ಎಂದೇ ಅಂದುಕೊಂಡುಬಿಡುತ್ತಿದ್ದೆ! ಈ ಭಾಷಾಪ್ರೇಮಿಯೂ ಕನ್ನಡದವಳೇ ಎಂದು ಗೊತ್ತಾಗಿದುದಕ್ಕೆ ಖೇದವಾಯಿತು.

ಕನ್ನಡ ರಕ್ಷಿಸಲು, ಪರಭಾಷಾ ಚಿತ್ರಗಳನ್ನು ವಿರೋಧಿಸಬೇಕಾಗಿಲ್ಲ. ತಮಿಳರಿಗೆ, ತೆಲುಗರಿಗೆ ಕನ್ನಡ ಕಲಿಸಬೇಕಾಗಿಲ್ಲ. ಅಂಗಡಿ ಮುಂಗಟ್ಟುಗಳ ಫಲಕಗಳನ್ನು ಕನ್ನಡದಲ್ಲಿ ತಿದ್ದಬೇಕಾಗಿಲ್ಲ, ಇಂಗ್ಲೀಷ್ ಕಂಡರೆ ಅಸಹ್ಯಪಡಬೇಕಾಗಿಲ್ಲ. ಎಲ್ಲ ಕನ್ನಡಿಗರು ಕೊನೆಯಪಕ್ಷ ಕನ್ನಡಿಗರೊಂದಿಗಿದ್ದಾಗ ಕನ್ನಡದಲ್ಲೇ ಮಾತಾಡಿ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಓದುವುದನ್ನೂ ಬರೆಯುವುದನ್ನೂ ಕಲಿಸಿಕೊಟ್ಟರೆ ಸಾಕು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

4 comments:

Bhimashankar Teli said...

Sakagi hogide sir. Nodi nodi. Kabar illa avarige sir. adru namma praytna navu madodu. Adu sudharisata ide anno satya matra gottu namage. Yenantiri..

ದೀಪಕ said...

ನಮಸ್ಕಾರ/\:)

'ಪ್ರಾಥಮಿಕ ಶಿಕ್ಷಣ ಖಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ' ಎ೦ಬ ನೀತಿಯನ್ನು ಜಾರಿಗೆ ತ೦ದರೆ ಸ್ವಲ್ಪ ಮಟ್ಟಿಗೆ ನಮ್ಮ ಭಾಷೆ ಸುಧಾರಣೆಯಾಗಬಹುದೇನೋ !
ಹಣಕ್ಕಾಗಿ ಹುಟ್ಟಿಕೊ೦ಡಿರುವ ಕೆಲವು ಕನ್ನಡ ಸ೦ಘಟನೆಗಳಿ೦ದ ಕನ್ನಡ ನಾಡು,ನುಡಿ ಸುಧಾರಣೆ ಅಷ್ಟಕ್ಕಷ್ಟೇ !

ಇ೦ತಿ,

ದೀಪಕ

Jayateerth Nadagouda said...

Namma sachivare BBMP kadeyinda CBSE shaalegannnu tereyalu horatiddare. Idu namma paristithi.EE BJP,congress nantaha raashtreeya pakshagalinda heegene aagodu. Rakshana VEdike davaru adhikaarakke barbeku.

ಸಿದ್ಧಾರ್ಥ said...

@Bhimashankar
ತಲಿ ಕೆಡಿಸ್ಕೋಬ್ಯಾಡ್ರಿ ತೇಲಿ ಅವ್ರ... ನಮ್ಮನೇಲಿ ಮಕ್ಳಿಗೆ ಕನ್ನಡಾ ಕಲ್ಸೂನು.. ಅಷ್ಟು ಸಾಕು ನೋಡ್ರಿ.

@ದೀಪಕ
ಮಾಧ್ಯಮ ಅಲ್ಲದಿದ್ದರೂ ಭಾಷಾ ಕಲಿಕೆಯನ್ನಾದರೂ ಕಡ್ಡಾಯಗೊಳಿಸಲೇ ಬೇಕು. ಸಮ್ಮೇಳನಾಧ್ಯಕ್ಷರು ಹೇಳಿದಂತೆ

@jayateerth
ವೇದಿಕೆ ಅಧಿಕಾರಕ್ಕೆ ಬಂದ್ರೂ ಅಷ್ಟೇ. ಹತ್ತರ ಜೊತೆ ಹನ್ನೊಂದು. ಕುರ್ಚಿ ತಲೆ ಕೆಡ್ಸತ್ತೆ. ಈ ವೇದಿಕೆಯವ್ರು ಗಲಾಟೆ ಮಾಡೊದನ್ನ ಬಿಟ್ಟರೆ ಬೇರೆ ಏನಾದರೂ ಒಳ್ಳೆ ಕೆಲ್ಸ ಮಾಡಿರೋದನ್ನ ನಾನಂತೂ ನೋಡಿಲ್ಲ.

ಎಲ್ರಿಗೂ ಧನ್ಯವಾದ. ಬರ್ತಾ ಇರಿ.