Friday, March 4, 2011

ಹೊಸಚೇತನ


ಭಾವನೆಗಳಿಗೆ ರೂಪ ಹೇಗೆ ನೀಡಲಿ
ಪದಗಳು ಅಡಗಿವೆ ಮರೆಯಲಿ
ಸಂತಸವ ಜನರೊಳು ಹೇಗೆ ಹಂಚಲಿ
ಮಿಂಚು ಹೊಮ್ಮಿದೆ ಮನದಲಿ

ಅರಿಯದ ಅನೇಕ ಭಾವ ಹೊಮ್ಮಿದೆ
ನಿನ್ನ ನಗೆಯ ಮಾಟದಿ
ಕಾಣದ ಲೋಕವ ಕಂಡು ಸುಖಿಸಿದೆ
ನಿನ್ನ ಕಂಗಳ ನೋಟದಿ

ಮುದ್ದು ಕೃಷ್ಣನೆ ಹಿಗ್ಗು ತಂದಿಹೆ
ನಮ್ಮ ಬಾಳನು ಬೆಳಗುತಾ
ಮೌನ ಗೀತೆಯ ಮನದಿ ತುಂಬಿದೆ
ನವ ಚೈತನ್ಯವ ಬೀರುತಾ

23-02-2011 ಬುಧವಾರ, ಮಾಘ ಬಹುಳ ಪಂಚಮಿಯಂದು ನನಗೆ ಅಪ್ಪನ ಸ್ಥಾನಕ್ಕೆ ಬಡ್ತಿ ಸಿಕ್ಕಿದೆ! ಕುಮಾರ ಕಂಠೀರವ ಧರೆಗೆ ಕಾಲಿಟ್ಟಿದ್ದಾನೆ.

5 comments:

ದೀಪಕ said...

ನಮಸ್ಕಾರ ಭಟ್ರೇ,

ಮಗನ ಆಗಮನ ಕುರಿತಾದ ಕವನ ಸು೦ದರವಾಗಿದೆ.
ತ೦ದೆಯ ಸ್ಥಾನಕ್ಕೆ ಭಡ್ತಿ ಪಡೆದು ಹೊಸದೊ೦ದು ಅನುಭವಕ್ಕೆ ಸಜ್ಜಾಗುತ್ತಿದ್ದೀರ.
ನಿಮಗೆ ಅಭಿನ೦ದನೆಗಳು.

- ದೀಪಕ

sunaath said...

ಸಿದ್ಧಾರ್ಥ,
ಶುಭಾಶಯಗಳು.

ಸಿದ್ಧಾರ್ಥ said...

ಧನ್ಯವಾದಗಳು, ದೀಪಕ್ ಹಾಗು ಸುನಾಥ್ ಅವರಿಗೆ.

Viji said...

Congrats Siddarth

ಸಿದ್ಧಾರ್ಥ said...

@Viji
Thanks viji