Thursday, January 3, 2008

"ಮತಾಂತರ" - ಒಂದು ಮಂಥನ

"ಮತಾಂತರ" ಇಂದು ಕೇವಲ ಕೆಲವೇ ಕೆಲವು ಅರ್. ಎಸ್. ಎಸ್. ಹಿನ್ನೆಲೆಯ ಸಂಘಟನೆಗಳು ಮತ್ತು ಕೆಲವು ಮಠಾಧೀಶರು ಚರ್ಚೆ ಮಾಡುವ ವಿಷಯವಾಗಿಬಿಟ್ಟಿದೆ. ಸಾಮಾನ್ಯ ನಾಗರಿಕನಿಗೆ ಇದರ ಅರಿವಿಲ್ಲವೋ ಅಥವಾ ಉದಾಸೀನವೋ ತಿಳಿಯದು. ನಮ್ಮ ಸುತ್ತಮುತ್ತಲೂ ಇಂಥ ಹಲವಾರು ಘಟನೆಗಳನ್ನು ನೋಡಿಯೂ ನಮಗರಿವಿಲ್ಲದಂತೆಯೇ ಇದ್ದುಬಿಡುತ್ತೇವೆ. ಒಬ್ಬ ಅಥವಾ ಇಬ್ಬರನ್ನು ಮತಾಂತರಿಸಿದರೆ ಆಗುವ ದುಷ್ಪರಿಣಾಮವಾದರೂ ಏನು ಎಂಬುದು ನಮ್ಮ ಭಾವನೆ. ಅಷ್ಟಕ್ಕೂ ಅವನು ಯಾವ ಮತದಲ್ಲಿದ್ದರೇನು? ಒಟ್ಟಿನಲ್ಲಿ ನಾವು ಅವರು ಎಲ್ಲರೂ ಚೆನ್ನಾಗಿದ್ದರೆ ಸಾಕು ಎನ್ನುವ ಉದಾತ್ತ ಮನೋಭಾವನೆ ಹಿಂದುಗಳದ್ದು. ಆದರೆ ಇದನ್ನು ಉದಾತ್ತ ಮನೋಭಾವನೆ ಎಂದರೆ ಸಧ್ಯದ ಪರಿಸ್ಥಿತಿಯಲ್ಲಿ ತಪ್ಪಾಗುತ್ತದೆ. ಇದನ್ನು ಸ್ವಧರ್ಮ ಪ್ರೇಮನಾಶದಿಂದ ಬಂದೊದಗಿದ ಆಲಸ್ಯ ಎನ್ನಬಹುದು. ನಾವೆಲ್ಲ ಅಂದುಕೊಂಡಂತೆ ಮತಾಂತರ ಒಂದು ಸಾಮಾನ್ಯ ವಿಷಯವಲ್ಲ. ಮತಾಂತರದ ಉದ್ದೇಶ ಮತ್ತು ಅದರಿಂದಾಗುವ ಪರಿಣಾಮಗಳನ್ನು ಅರಿತವನಿಗಂತೂ ಇದೊಂದು ಇಂದಿನ ಹಿಂದೂ ಸಮಾಜಕ್ಕೊದಗಿದ ಪೆಡಂಭೂತದಂತೆಯೇ ಗೋಚರಿಸಿದರೆ ತಪ್ಪಿಲ್ಲ.

ನವೆಂಬರ್ 12 2004 ಒಂಗೋಲ್, 15018 ಜನರನ್ನು ಒಂದೇ ದಿನದಲ್ಲಿ ಬ್ಯಾಪ್ಟೈಸ್ ಮಾಡಲಾಯಿತು. ಒಂದೇ ಒಂದು ವರ್ಷದೊಳಗೆ 10,000 ಚರ್ಚ್‌ಗಳ ಸ್ಥಾಪನೆಯ ಉದ್ದೇಶವನ್ನೂ ತಿಳಿಸಲಾಯಿತು. ಇಷ್ಟೆಲ್ಲ ನೆಡೆದಿದ್ದು ಕೇವಲ ಒಂದು ಕ್ರಿಶ್ಚಿಯನ್ ತಂಡದಿಂದ. ಸೆವೆಂತ್ ಡೇ ಅಡ್ವೆಂಟಿಸ್ಟ್. 1998ರಲ್ಲಿ 225,000 ಜನರನ್ನು ಹೊಂದಿದ್ದ ಸೆವೆಂತ್ ಅಡ್ವೆಂಟಿಸ್ಟ್ ಚರ್ಚ್ 2005ರ ಒಳಗೆ 825,000 ಜನರನ್ನು ಹೊಂದಿತ್ತು. ಇಂತಹಾ ನೂರಾರು
ತಂಡಗಳು, ಸಂಸ್ಥೆಗಳು ಭಾರತದ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿವೆ. ಇದು ಕೇವಲ ಒಂದು ಉದಾಹರಣೆಯಷ್ಟೆ. 2001ರಲ್ಲಿ ಅಂಧ್ರಪ್ರದೇಶದ ಕ್ರೈಸ್ತರ ಜನಸಂಖ್ಯೆ 6.96%. 2005ರಲ್ಲಿ ಅದು 17% ಆಗಿದೆ. ಇದೇ ದರದಲ್ಲಿ ಮುಂದುವರಿದರೆ ಇನ್ನೊಂದು ದಶಕ ಕಳೆಯುವಷ್ಟರಲ್ಲಿ ಆಂಧ್ರಪ್ರದೇಶ ಕಿರಿಸ್ತಾನವಾಗುತ್ತದೆ. ತಮಿಳು ನಾಡಿನ ಪರಿಸ್ಥಿತಿ ಇದಕ್ಕೆ ಹೊರತಾಗೇನಿಲ್ಲ. ಅಲ್ಲಿ ಈಗಲೇ ಜನಸಂಖ್ಯೆ 28%ಕ್ಕೆ ಮುಟ್ಟಿದೆ. ಆದರೆ ಈ ಅಂಕಿಅಂಶಗಳು ಹೊರಬರುತ್ತಿಲ್ಲ. ಏಕೆಂದರೆ ಇದರಿಂದ ಅಲ್ಪಮತೀಯರಿಗೆ ಸುಗುವ ರೆಸರ್ವೇಶನ್ ಮತ್ತಿತರೆ ಸವಲತ್ತುಗಳು ಸಿಗುವುದಿಲ್ಲವಾದ್ದರಿಂದ. ಇದರಿಂದಾದದುಶ್ಪರಿಣಾಮ ನಮ್ಮ ಕಣ್ಣಮುಂದೇ ಇದೆ. 1947ರಲ್ಲಿ ಸಂಪೂರ್ಣ ಹಿಂದೂರಾಜ್ಯಗಳಾಗಿದ್ದ ಈಶಾನ್ಯದ ನಾಲ್ಕು ರಾಜ್ಯಗಳಲ್ಲಿ ಈಗಿನ ಕ್ರೈಸ್ತರ ಜನಸಂಖ್ಯೆ 75% ದಿಂದ 95%ದ ವರೆಗೆ ಬೆಳೆದಿದೆ. ಕೇವಲ ಹಿಂದುಗಳ ಸಂಖ್ಯೆ ಇಳಿಮುಖವಾಗಿರುವುದು ಸಮಸ್ಯೆಯಲ್ಲ. ಈಗ ಆ ರಾಜ್ಯಗಳು ಭಾರತದಿಂದ ಬೇರ್ಪಡಲು ಹವಣಿಸುತ್ತಿವೆ!

ಮನುಷ್ಯ ಸಂಘಜೀವಿ. ಅವನು ಬಾಳಿ ಬದುಕಲು ಒಂದು ಸಮಾಜ ಬೇಕೇ ಬೇಕು. ಆ ಸಮಾಜವಿದ್ದಂತೆ ಅಲ್ಲಿಯ ಜನರ ಜೀವನ, ಭಾವನೆಗಳು, ಬೌದ್ಧಿಕ ವಿಕಸನಗಳು ಇರುತ್ತವೆ. ಒಂದು ಸಮಾಜಕ್ಕೆ ಸಂಸ್ಕೃತಿಯೆಂಬ ಗಟ್ಟಿಯಾದ ಹಿನ್ನೆಲೆ ದೊರೆತಾಗ ಮಾತ್ರ ಆ ಸಮಾಜದಿಂದ ವಿಶ್ವಕ್ಕೇ ಉತ್ತಮ ಕೊಡುಗೆಗಳನ್ನು ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಈಗಾಗಲೇ ನಶಿಸಿಹೋದ ಸಾವಿರಾರು ಜನಜೀವನಗಳಲ್ಲಿ ಅದೂ ಒಂದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. "ಹಿಂದೂ" ಎಂಬುದು ಒಂದು ಧರ್ಮವಷ್ಟೇ ಅಲ್ಲ. ಅದೊಂದು ಜೀವನ ಪದ್ಧತಿ. ಈ ಜೀವನ ಪದ್ಧತಿ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾಲದ ಪ್ರವಾಹಕ್ಕೆ ಸಿಕ್ಕು ತರಗಲೆಗಳಂತೆ ಉದುರಿಹೋದ ಇತರೇ ಸಂಸ್ಕೃತಿಗಳಂತಲ್ಲದೆ, ಸಾವಿರಾರು
ಆಕ್ರಮಣಗಳಿಗೊಳಗಾದರೂ ಮರ್ಮಾಘಾತಸಮ ಕೊಡಲಿ ಏಟುಗಳನ್ನು ತಿಂದರೂ ಹಿಂದೂ ಸಂಸ್ಕೃತಿ ಅಲುಗಾಡದೇ ಬೃಹದ್ ವಟವೃಕ್ಷದಂತೆ ಬೆಳೆದು ನಿಂತಿದೆ. ಇದಕ್ಕೆ ಕಾರಣವಿಷ್ಟೆ. ಇದರ ಮೂಲದಲ್ಲಿ ದೋಷವಿರಲಿಲ್ಲ. ಕಲ್ಮಶ ಕಪಟಗಳು ಇದರೆಡೆಗೆ ಸುಳಿಯಲಿಲ್ಲ. ಇತರರನ್ನು ಬಲಾತ್ಕಾರವಾಗಿ ತನ್ನೆಡೆಗೆ ಸೆಳೆಯುವ ಕ್ರೂರತ್ವ ಇದರಲ್ಲಿರಲಿಲ್ಲ. "ವಸುಧೈವ ಕುಟುಂಬಕಂ", ಇಡೀ ವಿಶ್ವವೇ ಒಂದು ಕುಟುಂಬ ಎಂಬಂತಹ ಮಹತ್ತರವಾದ ಧೋರಣೆ ಈ ಧರ್ಮದ್ದಾಗಿದೆ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ" ಎಂದು ಹೀಳಿದ ಈ ಧರ್ಮದ ಉದಾತ್ತ ಮನೋಭಾವವೆಲ್ಲಿ; ಕೇವಲ ನಾನು ನಂಬಿರುವವನಷ್ಟೇ ದೇವರು, ಬೇರೆಯವರನ್ನು ನಂಬಿರುವವರೆಲ್ಲರೂ ಮಹಾನ್ ಪಾಪಿಗಳು ಎಂದು ಸಾರುವ ಮತಗಳೆಲ್ಲಿ?

ಮತಾಂತರದ ಪರಿಣಾಮದ ವ್ಯಾಪ್ತಿ ಕೇವಲ ಮನುಷ್ಯನ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲ. ಮತಾಂತರದಿಂದ ರಾಷ್ಟ್ರಾಂತರವಾಗುತ್ತದೆ. ಅಯೋಧ್ಯೆ ದ್ವಾರಕೆಗಳು ಪವಿತ್ರಭೂಮಿಗಳಾಗಿದ್ದ ವ್ಯಕ್ತಿಗೆ ಇನ್ನು ಮುಂದೆ ಅವು ಕೇವಲ ಇತರ ನಗರಗಳಂತಾಗಿ, ರೋಮ್ ಬೆತ್ಲಹೇಮ್‌ಗಳು ಪವಿತ್ರಭೂಮಿಗಳಾಗುತ್ತವೆ. ತುಳಿಯುತ್ತಿರುವ ನೆಲ ಕೇವಲ ಮಣ್ಣಾಗಿ ಉಳಿಯುತ್ತದೆಯೇ ಹೊರತು ಯೋಗಭೂಮಿಯಾಗಿ, ಭಾರತಮಾತೆಯಾಗಿ ಕಾಣಿಸುವುದಿಲ್ಲ. ಇನ್ನು ಅವಳಬಗ್ಗೆ ಪ್ರೀತಿ ಎಲ್ಲಿಂದ ಹುಟ್ಟಬೇಕು? ಗಂಗೆ ಪತಿತಪಾವನೆಯಾಗದೆ ಕೇವಲ ನೀರಾಗುತ್ತಾಳೆ. ಹಿಮಾಲಯ ಸಾಧು ಸಂತರ ಆಧ್ಯಾತ್ಮ ತಾಣವಾಗದೆ ಕೇವಲ ಕೆಲಸಕ್ಕೆ ಬಾರದ ಹಿಮಾವ್ರತ ಬಂಜರು ಭೂಮಿಯಾಗುತ್ತದೆ. ದೇಶದ ಆದರ್ಶಪುರುಷರುಗಳಾದ ರಾಮ, ಕೃಷ್ಣ, ವೇದವ್ಯಾಸ, ಅಗಸ್ತ್ಯ, ವಾಲ್ಮೀಕಿ, ಚಾಣಕ್ಯರುಗಳೆಲ್ಲ ಕಾಲ್ಪನಿಕ ಪಾತ್ರಗಳಾಗುತ್ತಾರೆ. ಧರ್ಮೋಧ್ಧಾರಕರಾದ ಶಂಕರ, ಮಾಧ್ವ, ರಾಮಾನುಜ, ಸಮರ್ಥ ರಾಮದಾಸ, ವಿದ್ಯಾರಣ್ಯ, ರಾಮಕೃಷ್ಣ, ವಿವೇಕಾನಂದರು ಪಾಪಿಗಳಾಗುತ್ತಾರೆ. ದೇಶದ ಒಳಿತಿಗೆ ಜೀವನವನ್ನೇ ಮುಡಿಪಾಗಿಟ್ಟ ಶಿವಾಜಿ, ರಣಾ ಪ್ರತಾಪ್, ಪ್ರಥ್ವಿರಾಜ, ಝಾನ್ಸಿ ರಾಣಿ, ಚಂದ್ರಗುಪ್ತ, ವಿಕ್ರಮಾದಿತ್ಯರು ನಗೆಪಾಟಲಾಗುತ್ತಾರೆ. ಒಟ್ಟಿನಲ್ಲಿ ದೇಶದಮೇಲಿನ ಶ್ರದ್ಧೆ ಭಕ್ತಿ ಗೌರವಗಳು ಮಾಯವಾಗಿ ಇದೇ ಭಕ್ತಿ ಶ್ರದ್ಧೆಗಳು ಇನ್ನೊಂದು ದೇಶದ ಪಾಲಾಗುತ್ತದೆ.

ಇಷ್ಟಕ್ಕೂ ಪರಮತಸಹಿಷ್ಣುತೆ ಕೇವಲ ಹಿಂದುಗಳೇಕೆ ಅನುಸರಿಸಬೇಕು? ಒಂದು ಕಾನೂನು ಅಥವಾ ನಿಯಮ ಫಲಕಾರಿಯಾಗುವುದು ಪ್ರತಿಯೊಬ್ಬನೂ ಅದನ್ನು ಪಾಲಿಸಿದಾಗ ಮಾತ್ರ. ಅಲ್ಪಸಂಖ್ಯಾತರು ಧರ್ಮಪ್ರಚಾರ ಪರಧರ್ಮನಿಂದನೆ ಮಾಡಿದರೆ ಅದು ಜಾತ್ಯಾತೀತತೆ, ಬಹುಸಂಖ್ಯಾತರು ಇದನ್ನು ಪ್ರತಿಭಟಿಸಿದರೇ ಅದು ಕೋಮುವಾದ ಎಂದು ಅರ್ಥೈಸುತ್ತಿರುವ ಇಂದಿನ ರಾಜಕಾರಣಿಗಳು ಮತ್ತು ತಥಾಕಥಿತ ಬುದ್ಧಿಜೀವಿಗಳಿಗೆ ಬುದ್ಧಿಬ್ರಮಣೆಯಾಗಿದೆಯೆನ್ನಬೇಕಲ್ಲವೆ. ಧರ್ಮನಾಶವಾಗುತ್ತಿರಬೇಕಾದರೆ ಕೈ ಕಟ್ಟಿ ಕುಳಿತುಕೊಳ್ಳುವುದು
ಹಿಂದುವಿನ ಸ್ವಭಾವವಲ್ಲ. ಅಂದು ಮಹಾಭಾರತದಲ್ಲಿ ಕುರುವಂಶದರಿಂದ ಧರ್ಮನಾಶವಾದಾಗ ಕೃಷ್ಣ ಪಾಂಡವರಿಗೆ ಕೈ ಕಟ್ಟಿ ಕೂತಿರಿ ಎಂದು ಹೇಳಲಿಲ್ಲ. ಸ್ವಜನರ ಹತ್ಯೆ ನನ್ನಿಂದಾಗದು ಎಂದು ಅರ್ಜುನ ಬಿಲ್ಲು ಬಿಸುಟಿ ಕುಳಿತಿದ್ದಾಗ ಗೀತೋಪದೇಶ ನೀಡಿ "ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದುಚ್ಛರಿಸಿದಾಗಲೇ ಧರ್ಮ ಕೇವಲ ಶಾಸ್ತ್ರವಿಚಾರಗಳಿಂದ ಕೂಡಿರುವುದಷ್ಟೇ ಅಲ್ಲ, ಶಸ್ತ್ರವನ್ನೂ ಹಿಡಿದು ಯುದ್ಧಮಾಡುವುದೂ ಇದಕ್ಕೆ ಗೊತ್ತಿರಬೇಕು ಎಂದು ಆ ಜಗದ್ಗುರುವು ಸಾರಿದ. ಇಂತಹ ಮತಾಂತರಗಳ ಮೂಲವನ್ನರಿತುದಕ್ಕೇ ಇರಬೇಕು ಸ್ವಾಮಿ ವಿವೇಕಾನಂದರು "ಒಬ್ಬ ಹಿಂದು ಮತಾಂತರಗೊಂಡರೆ, ಒಬ್ಬ ಹಿಂದು ಕಡಿಮೆಯಾದುದಷ್ಟೇ ಅಲ್ಲ ಒಬ್ಬ ವೈರಿ ಹೆಚ್ಚಾದಂತೆ" ಎಂದು ಹೇಳಿದುದು. ಆದರೆ ಕೇವಲ ಅವರ ಮಾತುಗಳನ್ನು ಕೇಳಿ ಈಗಿನ ಜನತೆಗೆ ಬುದ್ಧಿಬರುವುದು ಕಷ್ಟವೇ ಇದೆ. ಬಹುಶಃ ಭಾರತವನ್ನು ಭಾರತವಾಗೇ ಇರಿಸಲು ವಿವೇಕಾನಂದರು ಮತ್ತೊಮ್ಮೆ ಹುಟ್ಟಿ ಬರಬೇಕೋ ಏನೊ?

6 comments:

C.A.Gundapi said...

Chennagi baredidiya .. Ee NaduVe MataNtaRaGoLiSaLu AniVarYa Sthithigalagalla Tandu biduttare.. Ex: Kolaralli Christain mission promised to get borewell and all basic needs required . only if they get converted. Since ppl r helpless they go for it .

ದೀಪಕ said...

ನಮಸ್ಕಾರ/\:)

ನಮ್ಮ ದೇಶದಲ್ಲಿ ಮತಾ೦ತರ ಹೆಚ್ಚಾಗಿರುವುದು ನಿಜವಾಗಿಯೂ ವಿಷಾದಕರ ಬೆಳವಣಿಗೆ. ಕ್ರಿಶ್ಚಿಯನ್ನರು ಅಥವಾ ಮುಸಲ್ಮಾನರು ಮತಾ೦ತರ ಮಾಡಿದರೆ, ನಮ್ಮ ರಾಜಕೀಯ ಮುಖ೦ಡರು (ಕಪಟ ಜಾತಿವಾದಿಗಳು) ಮತ್ತು ಬುದ್ಧಿಜೀವಿಗಳು ಮೌನವಾಗಿರುತ್ತಾರೆ. ಅದೇ, ಮೊನ್ನೆ ಒರಿಸ್ಸಾದಲ್ಲಿ ಹಿ೦ದೂ ಧರ್ಮದಿ೦ದ ಕ್ರಿಶ್ಛಿಯನ್ ಧರ್ಮಕ್ಕೆ ಮತಾ೦ತರಗೊ೦ಡಿದ್ದ ಹಲವಾರು ಮ೦ದಿ ಮತ್ತೆ ಹಿ೦ದೂ ಧರ್ಮಕ್ಕೆ ಮರು-ಮತಾ೦ತರಗೊ೦ಡರು. ಈ ಸ೦ದರ್ಭದಲ್ಲಿ ಆ ಪ್ರದೇಶದಲ್ಲಿ ಕಾ೦ಗ್ರೆಸ ಮುಖ೦ಡರು ದಾ೦ದಲೆ ನಡೆಸಿ, ಹಿ೦ದೂ ಮುಖ೦ಡರ ಮೇಲೆ ಹಲ್ಲೆ ಮಾಡಿ ಕೋಲಾಹಲ ಎಬ್ಬಿಸಿದರು. ಆ ಪ್ರದೇಶದಲ್ಲಿ ಸುಮಾರು ಒ೦ದು ವಾರದ ವರೆಗೆ ಕರ್ಫ್ಯೂ ಜಾರಿಯಲ್ಲಿತ್ತು. ಅದೇ ಕಾ೦ಗ್ರೆಸ್ಸಿಗರು, ಕ್ರಿಶ್ಚಿಯನ್ / ಮುಸಲ್ಮಾನ ಮಿಷನರಿಗಳು ಮತಾ೦ತರದಲ್ಲಿ ಪಾಲ್ಗೊ೦ಡಿದ್ದರೆ, ತಮಗೂ ಅದಕ್ಕೂ ಏನೂ ಸ೦ಬ೦ಧವಿಲ್ಲವೆ೦ಬ೦ತೆ ಸುಮ್ಮನಿರುತ್ತಾರೆ. ಡೊ೦ಗಿ ಜಾತಿವಾದಿಗಳು... ಛೇ !!
ಮತಾ೦ತರವು ಮನುಷ್ಯನಿಗಷ್ಟೇ ಸೀಮಿತವಾಗಿಲ್ಲ. ಮೊಘಲರು ನಮ್ಮ ದೇಶದ ಊರು, ಸಮುದ್ರಗಳ ಹೆಸರುಗಳನ್ನು ಸಹ ಮತಾ೦ತರಗೊಳಿಸಿದ್ದಾರೆ. 'ರತ್ನಾಕರ ಸಮುದ್ರ'ವನ್ನು 'ಅರಬ್ಬಿ ಸಮುದ್ರ', ತ್ರಿವೇಣಿ ಸ೦ಗಮವಾದ 'ಪ್ರಯಾಗ'ವನ್ನು 'ಅಲ್ಲಾಹಬಾದ್' .. ಹೀಗೆ ಹಲವಾರು ಸ್ಥಳಗಳು, ಸಮುದ್ರಗಳು, ಬೆಟ್ಟಗಳು, ಸಿಕ್ಕಿಸಿಕ್ಕಿದ್ದನ್ನೆಲ್ಲಾ ಮತಾ೦ತರಗೊಳೆಸಿ ಹೋಗಿದ್ದಾರೆ.

ಇನ್ನಾದರು ಹಿ೦ದೂಗಳಲ್ಲಿ ಧರ್ಮಾಭಿಮಾನ ಹೆಚ್ಚಾಗಿ, ಹಿ೦ದೂ ಧರ್ಮದ ಒಳಿತೆಗಾಗಿ ಹೋರಾಡುವ೦ತಾಗಬೇಕು. ಸ್ವಾಮಿ ವಿವೇಕಾನ೦ದರ ಆದರ್ಶ ಮತ್ತು ತತ್ವಗಳನ್ನು ಮು೦ದಿನ ಪೀಳಿಗೆಗೆ ತಲುಪಿಸುವ೦ತಾಗಬೇಕು.

ಒ೦ದು ಅರ್ಥಪೂರ್ಣವಾದ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.

|| ಜೈ ಶ್ರೀ ರಾಮ್ ||

ಇ೦ತಿ,

ದೀಪಕ

ಸಿದ್ಧಾರ್ಥ said...

@gundapi
ಹೌದು. ಅವರ ಹಲವಾರು ತಂತ್ರಗಳಲ್ಲಿ ಇದೂ ಒಂದು.

@ದೀಪಕ
ಮೊಘಲರ ಮತಾಂತರವನ್ನು ನಮ್ಮ ಪೂರ್ವಜರು ಹೇಗೋ ಎದುರಿಸಿಬಿಟ್ಟಿದ್ದಾರೆ. ಶಿವಾಜಿಯಂಥ ಅವತಾರ ಪುರುಷನೇ ಜನ್ಮಿಸಿ ಅವರನ್ನು ಬಗ್ಗು ಬಡಿದಿದ್ದಾನೆ. ಆದರೆ ಈಗಿನ ಪರಿಸ್ಥಿತಿಯ ಜವಾಬ್ದಾರಿ ನಮ್ಮದೇ ಆಗಿದೆ.

ಹೀಗೇ ಬಂದು ಹೋಗುತ್ತಿರಿ. ಧನ್ಯವಾದಗಳು.

Karna Natikar said...

ಒಬ್ಬ ಹಿಂದು ಮತಾಂತರಗೊಂಡರೆ ಒಬ್ಬ ವೈರಿ ಹೆಚ್ಚಾದಂತೆ , ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಸ್ವಾಮಿ ವಿವೇಕಾನಂದರ ಈ ಮಾತು ಎಲ್ಲರಿಗೂ ಅರ್ಥವಾಗುವಷ್ಟಿಗೆ ನಮ್ಮ ಅಣ್ಣ ತಮ್ಮಂದಿರೆಲ್ಲ ಕಿರಿಸ್ತಾನರೊ ಇಲ್ಲ ಮುಸ್ಲಿಮರೊ ಆಗಿರುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಡವರೆ ಹೆಚ್ಚಾಗಿ ಇಂಥ ಕ್ರೂರತೆಗೆ ತುತ್ತಾಗುತ್ತಿದ್ದರೆ, ಅವರು ನಮ್ಮ ನೂನ್ಯತೆಗಳನ್ನ ತಮ್ಮ ಲಾಭಕ್ಕೆ ಉಪಯೋಗಿಸುತ್ತಿದ್ದಾರೆ ಛೆ!.
ಒಳ್ಳೆ ಅಂಕಣ ಸಿದ್ದಾ , ಭೈರಪ್ಪ ನವರ ಲೇಖನಗಳು ನಿನಗೆ ತುಂಬ ಸ್ಫೂರ್ಥಿ ಕೊಡುತ್ತಿವೆ ಅಂತ ಕಾಣುತ್ತೆ, ಹೀಗೆ ಬರಿತಾ ಇರು
ಕರ್ಣ

ಸಿದ್ಧಾರ್ಥ said...

@ಕರ್ಣ
ಧನ್ಯವಾದಗಳು. ಇತರರ ನ್ಯೂನತೆಗಳೇ ಯಾವಾಗ್ಲೂ ಪರರಿಗೆ ಲಾಭದಾಯಕ ಅಂಶಗಳಲ್ವೇ?
ಈ ನನ್ನ ಅಭಿಪ್ರಾಯಕ್ಕೆ ಸ್ಪೂರ್ತಿ ನಾನು ಬೆಳೆದ ಪರಿಸರವಾದರೂ, ಬರವಣಿಗೆಗೆ ಸ್ಪೂರ್ತಿ ಭೈರಪ್ಪನವರ "ಧರ್ಮಶ್ರೀ" ಎನ್ನುವುದು ೧೦೦% ಸತ್ಯ.

ಹೀಗೇ ಬಂದು ಹೋಗುತ್ತಿರಿ.

Durga Das said...

Nanna geleyanobba sadyadalle mathantaragonda, adakku munche awanobba HINDUwaagida , yella habbagalannu nanagintha hechina shraddhe, bhakthigalinda maaduthidda.. yen aaitho naa kaane, chruchgalige betikodalu shurumaadida.. kade kadege OH jesus heal us !! yendella maathadalu shurumaadida..

awana maneyalli tondaregaliddavu , chruchgallali Bible odi heli, awana manha parivarthisidaare. awana kastadalli shaahaya maadiddare..

nanage indigu naachikeyaagu vishiyavendare namma hindu devaalayagalli DAKSHINE doodige haathoreyuva POOJARIgalu devastanavannu nadesuva sangasamthegalu..
- doodu kottarene devara darushana , prasada, wara, pooje yendu heluva devastanagaliginta bitti oota, baate, sthala yella kottu bere mathakke serisikollore uttama yendu jana tammatanwanne maarikoltha idaare..

uttama baraha.. nimm blog odiyaadaru jana swalpnaadaru yechithikollali yenu aashishuve..