Thursday, December 13, 2007

ವೀಕೆಂಡ್‌ಗೆ ಎನ್ ಗುರು ವಿಶೇಷ?

ಶುಕ್ರವಾರ ಸಂಜೆ ಆಯಿತೆಂದರೆ ಸಾಕು. ಸಾಫ್ಟ್‌ವೇರ್ ಇಂಜಿನಿಯರುಗಳೆಲ್ಲರ ಮುಖಾರವಿಂದಗಳು ಅರಳಿಬಿಡುತ್ತವೆ. ಎರಡು ದಿನ ರಜೆ ಇದೆ, ಏನಾದರು ವಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದಲ್ಲ. ಇನ್ನೆರಡು ದಿನ ಆಫಿಸ್‌ಗೆ ಹೋಗಬೇಕಾಗಿಲ್ಲವಲ್ಲಾ ಎಂದು! ಎಲ್ಲರಿಗೂ ಈ ಸಾಫ್ಟ್‌ವೇರ್ ಉದ್ಯೋಗ ಎಷ್ಟು ಹಿಡಿಸಿದೆ ಎನ್ನುವುದಕ್ಕೆ ಬೇರಾವ ಪುರಾವೆಗಳೂ ಬೇಕಿಲ್ಲವಲ್ಲವೆ. ಬಹಳಸಲ ಹಾಗೇ ಆಗುತ್ತದೆ. ಹೊರಗೆ ಹೋಗುವ ಮನಸ್ಸಿಲ್ಲದಿದ್ದರೂ ರಜೆ ಇದೆಯಲ್ಲಾ ಎಂದು plan ಹಾಕಿಯೇಬಿಡುತ್ತೇವೆ. ಆ planಗಳು ಎಷ್ಟು ಫಲಕಾರಿಯಾಗುತ್ತವೆಯೋ ಶನಿವಾರ ಬೆಳಿಗ್ಗೆಯೇ ಗೊತ್ತಾಗಬೇಕು.

ಯಾಕೋ ಆ ಶನಿವಾರ ಬೆಳಿಗ್ಗೆ ಬಹಳ ಬೇಗನೇ ಎಚ್ಚರವಾಗಿಬಿಟ್ಟಿತು. ೮ ಗಂಟೆಗೆ! ಇವತ್ತು ವೀಕೆಂಡ್ ಎಂದು ನೆನಪಾದಮೇಲಂತೂ ನಿದ್ದೆ ಹಾರಿಯೇ ಹೋಯಿತು. ತಲೆಯಲ್ಲಿ ಐದಾರು ಗೆಳೆಯರ ಚಿತ್ರಗಳು ಯಕ್ಷಗಾನ ಮಾಡತೊಡಗಿದವು. ಅವನನ್ನು ಕಂಡು ಎಷ್ಟು ದಿನ ಅಯ್ತು. ಒಂದು ಫೋನ್ ಕೂಡಾ ಮಾಡ್ಲಿಲ್ಲ. ಈ ವೀಕೆಂಡ್ ಅವನ ಹತ್ರಾನೇ ಹೋಗೋಣ. ಆದರೆ ನಾನೇ ಯಾಕೆ ಫೋನ್ ಮಾಡ್ಬೇಕು? ಬೇಕಾದ್ರೆ ಅವನೇ ಮಾಡ್ತಾನೆ, ಎಂದುಕೊಳ್ಳುವಷ್ಟರಲ್ಲಿ ಒಂದು ಪಾತ್ರ ಕಡಿಮೆಯಾಯಿತು. ಇವನನ್ನ ಎರಡು ವಾರದ ಹಿಂದಷ್ಟೇ ಭೇಟಿಯಾದೆ. ಇವನಂತೂ ಯಾವಾಗ್ಲೂ chatನಲ್ಲಿ ಸಿಗ್ತಾನೆ. ಇವನಂತೂ onsiteನಲ್ಲಿದಾನೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ಮೂರು ಪಾತ್ರಗಳು ನೇಪಥ್ಯಕ್ಕೆ ತಿರುಗಿದವು.

ಉಳಿದ ಎರಡೇ ಎರಡು ಪಾತ್ರಗಳಲ್ಲಿ ಒಂದು ಗಿರಿನಗರದಲ್ಲಿ ಕುಣಿಯುತ್ತಿದ್ದರೆ ಇನ್ನೊಂದು ವೈಟ್‌ಫೀಲ್ಡ್‌ನಲ್ಲಿ ಕುಣಿಯುತ್ತಿತ್ತು. ಹಾಸಿಗೆಯಲ್ಲೇ ಹೊರಳಾಡುತ್ತಾ ಪಕ್ಕದಲ್ಲೇ ಇದ್ದ ಲ್ಯಾಪ್‌ಟಾಪ್ on ಮಾಡಿ, ಇದ್ದು ಬಿದ್ದ playlistಗಳನ್ನೆಲ್ಲಾ winampಗೆ ತುಂಬಿ play ಮಾಡಿದೆ. ಗಿರಿನಗರದಲ್ಲಿ ಕುಣಿಯುತ್ತಿದ್ದ ಪಾತ್ರದ ಜೊತೆಗೇ ಕುಣಿದರಾಯಿತು ಎಂದಂದುಕೊಂಡು phone ಮಾಡಿದೆ. Not Reachable! ಯಾವ ಊರಿನ ಯಾವ ಕೊಂಪೆಯಲ್ಲಿ ಬಿದ್ದಿದ್ದಾನೊ ಎಂದಂದುಕೊಂಡು ಉಳಿದ ಒಂದೇ ಒಂದು ಪಾತ್ರಕ್ಕೆ ಕರೆ ಮಾಡಿದೆ. ನಾಲ್ಕೇ ನಾಲ್ಕು ಮಾತುಗಳಲ್ಲಿ ಪಾತ್ರ ಮುಗಿದು ಹೋಯಿತು.
"ಎಲ್ಲಿದೀಯೋ?"
"ಮನೇಲಿ"
"ವೀಕೆಂಡ್‌ಗೆ ಎನ್ ಗುರು ವಿಶೇಷ?"
"ನಾನು ಸಿರ್ಸಿ ಮನೇಲಿದೀನಿ ಕಣೋ"
"ಓ... ಸಿರ್ಸಿಲಿದೀಯಾ? ಸರಿ ಬಿಡು. ಬಂದ್‌ಮೇಲೆ ಕಾಲ್ ಮಾಡು"

ರಂಗಸ್ಥಳ ಖಾಲಿಯಾಯಿತು. ಗಂಟೆ ಇನ್ನೂ ಬೆಳಿಗ್ಗೆ ೯. ಕೆಲಸವಿಲ್ಲ ಕಾರ್ಯವಿಲ್ಲ. ಥತ್... ಬರೀ ಗಂಡು ಪಾತ್ರಗಳು. ಒಂದಾದರೂ ಸ್ತ್ರೀ ವೇಷ ಇದ್ದಿದ್ದರೆ ರಂಗಸ್ಥಳ ಹೀಗೆ ಬರಿದಾಗುತ್ತಿರಲಿಲ್ಲ ಎನಿಸಿತು. ಈ ಅನಿಸಿಕೆ ನಿದ್ರಾದೇವಿಗೆ ಕೇಳಿಹೋಯಿತೊ ಏನೊ. ಮತ್ತೆ ಬಂದು ಮುಸಿಕಿದಳು. ನಾನೂ ಮುಸುಕೆಳೆದುಕೊಂಡೆ.

winampನಲ್ಲಿ ಭಾವಗೀತೆಗಳು ಮುಗಿದು ಭಕ್ತಿಗೀತೆಗಳು ಪ್ರಾರಂಭವಾಗಿದ್ದವು. ದಾಸರ ಪದ ತನ್ನ ಇಂಪನ್ನು ಪಸರಿಸುತ್ತಿತ್ತು.
"ಹ್ಯಾಂಗೆ ಮಾಡಲಯ್ಯಾ ಕೃಷ್ಣ... ಹೋಗುತಿದೆ ಆಯುಷ್ಯ..."

7 comments:

Karna Natikar said...

ಸ್ತ್ರೀ ವೇಷ ಇದ್ರೆನೆ ರಂಗಭೂಮಿಗೆ ರಂಗು ಬರೋದು ;-), ಪದಗಳ ಉಪಯೊಗ ಚೆನ್ನಾಗಿ ಮಾಡಿದ್ದಿಯ ಹೀಗೆ ಬರಿತ ಇರು. ಅಂದಂಗೆ ವೀಕೆಂಡ್ ಗೆ ಎನ್ ಗುರು ವಿಶೇಷ?

-ಕರ್ಣ

ದೀಪಕ said...

ನಮಸ್ಕಾರ/\:)

ಏನ್ ಸಿದ್ಧಾ ! ನಿನ್ನ ಲೇಖನ, ನಿನ್ನ ಜೀವನದ ರ೦ಗಮ೦ಚದಲ್ಲಿ ಸ್ತ್ರೀ ವೇಷಧಾರಿಣಿಯ ರ೦ಗ ಪ್ರವೇಶ ಆಗ್ತಾ ಇದೆ ಎನ್ನುವ ವಿಚಾರಕ್ಕೆ ಪೀಠಿಕೆ ಇದ್ದ ಹಾಗಿದೆ.
ಏನ್ ಗುರು ಏನ್ ಸಮಾಚಾರ ?

ನಿನ್ನ ಕಲ್ಪನಾಲೋಕದಿ೦ದ ಒ೦ದು ಸೊಗಸಾದ ಲೇಖನವನ್ನು ಹೆಕ್ಕಿ, ಅದನ್ನು ಟೈಪಿಸಿ ಬ್ಲಾಗಿನಲ್ಲಿ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

ಇ೦ತಿ,

ದೀಪಕ

ಸಿದ್ಧಾರ್ಥ said...

@ಕರ್ಣ: ವೀಕೆಂಡ್ ಫುಲ್ ಡೇಟಿಂಗು... ನಿದ್ರಾದೇವಿ ಜೊತೇಲಿ :)

@ದೀಪಕ: ಪೀಠಿಕೆನೂ ಇಲ್ಲಾ ಮಣ್ಣೂ ಇಲ್ಲಾ ಗುರು. ಸುಮ್ನೆ ಗ್ಲಾಮರ್‌ಗೆ ಇರ್ಲಿ ಅಂತಾ ಬರೆದೆ.

ಹೀಗೇ ಬಂದು ಕಮೆಂಟಿಸ್ತಾ (ಕಮೆಂಟು ಬರೀತಾ) ಇರಿ.

C.A.Gundapi said...

maga super one .. Sakat nakke nanu

ಸಿದ್ಧಾರ್ಥ said...

@gundapi - Thanks maga :)

Pramod said...

ಬಹಳ ಚೆನ್ನಾಗಿದೆ. ನಗೆ ಟಾನಿಕ್ :)

Durga Das said...

Super!!!!