Thursday, December 6, 2007

ನಾವು ಕನ್ನdigaru - ೨

ಸಂದರ್ಭ: ಶುಕ್ರವಾರ ರಾತ್ರಿ ೧೦ ಘಂಟೆಯ ಶೋ ನೋಡಲು Innovative Multiplexಗೆ ಹೋಗಿದ್ದೆ. ಅಲ್ಲಿ ಒಂದಿಷ್ಟು ಜನರ ಗುಂಪುಗಳು ನಿಂತು ಸಮಯ ದೂಡಲು ಮಾತುಕತೆಯಲ್ಲಿ ಮುಳುಗಿದ್ದವು. ಆ ಗುಂಪುಗಳ ನಡುವೆ ನಡೆಯುತ್ತಿದ್ದ ಸಂಭಾಷಣೆಗಳು ಇಂತಿದ್ದವು.

ಒಂದನೆಯ ಗುಂಪು:
ಒಬ್ಬ: ಇಂದ ಪಡತ ನಾನ್ ಯೆರುಕಿನೇ ಪಾರ್ತಿಟ್ಟೇನ್. ಪದಮ್ ರೊಂಬ ನಲ್ಲ ಇರುಕು. ಅದನಾಲದಾನ್ ಇನ್ನೋರುವಟಿ ಪಾಕವಂದೇನ್.
ಇನ್ನೊಬ್ಬ: ಹೇ ಮಚ್ಚಾ, ಉನುಕು ತೆರಿಯಾಮಾ? ರಜನಿ ಸಾರ್ ಶಂಕರ ಉಡಿಯಾ ಪದಮ್ ಪನ್ರಾರು. ನಿಶ್ಚೈಮಾ ಪೆರಿಯಾ ಹಿಟ್ ಆವುಮ್.

ಎರಡನೆಯ ಗುಂಪು:
ಒಬ್ಬ: ಮಾಮಾ, ನೇನು ಇಪ್ಪುಡು Flextronicsಲೊ ಪಣಿ ಚೇಸ್ತಾವುನ್ನಾನು.
ಇನ್ನೊಬ್ಬ: ಅಲಗಾ? ಯೇಂತಾ ಜೀತಮ್ ಇಸ್ತುನ್ನಾರು ವಲು? ಚಾಲ ಇಶ್ಟಾರು ಅನುಕುಂಟಾ? ಇಪ್ಪುಡು ಚಾಲ ವರದಕ್ಷಿಣಮ್ ಕೂಡಾ ದೊರಕುತುಂದಿ. ಹಾ... ಹಾ... ಹಾ...

ಮೂರನೇ ಗುಂಪು:
ಆಕೆ: ಹೇ ಪುಟ್ಟಾ, Come here. ಬಾ ಇಲ್ಲಿ.
ಮಗು: Paapa... paapa... I want that. Paapa...
ಈತ: No ಪುಟ್ಟಾ, thats not good for health. Come ಶಾಲು, ಆಕಡೆ ಹೋಗೋಣ. Otherwise he will start crying now.
ಆಕೆ: Wait a second. Let ಮಾಲತಿ also come.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

7 comments:

ದೀಪಕ said...

ನಮಸ್ಕಾರ/\:)

ಬೆ೦ಗಳೂರಿನಲ್ಲಿ ಕನ್ನಡಿಗರನ್ನು ಪತ್ತೆ ಹಚ್ಚಲು ಉತ್ತಮವಾದ ಮಾರ್ಗವನ್ನು ಸೂಚಿಸಿದ್ದೀಯಾ. ಭಾಷಾಭಿಮಾನವಿಲ್ಲದ ಕನ್ನಡಿಗರಿಗೆ ಧಿಕ್ಕಾರ !!
ಆದರೆ, ತಮಿಳು ತೆಲುಗಿನಲ್ಲಿ ಅವರು ಏನು ಮಾತಾಡಿಕೊ೦ಡರು ಅ೦ತ ಕನ್ನಡದಲ್ಲಿ ಅನುವಾದಿಸಿದ್ದರೆ, ಚೆನ್ನಾಗಿರುತ್ತಿತ್ತೇನೋ !!

' ಉಯಯವಾಯಿತು ಚೆಲುವ ಕನ್ನಡ ನಾಡು' ಮಾಲಿಕೆ ಹೀಗೆಯೇ ಮು೦ದುವರೆಯಲಿ.

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ

ಸಿದ್ಧಾರ್ಥ said...

ನಿನ್ನ ಅನಿಸಿಕೆಗಳಿಗೆ ಧನ್ಯವಾದಗಳು. ತಮಿಳಿಗರು ಸಿನೆಮಾದ ಬಗ್ಗೆ, ತೆಲುಗರು ಉದ್ಯೋಗ ಮತ್ತು ವರದಕ್ಷಿಣೆ ಬಗ್ಗೆ (ಸಾಮಾನ್ಯವಾಗಿ ಮಾತನಾಡಿಕೊಳ್ಳುವಂತೆ) ಮಾತನಾಡಿಕೊಳ್ಳುತ್ತಿದ್ದರು. ಇಲ್ಲಿ ಆ ಮಾತುಗಳ ಅರ್ಥಕ್ಕೆ ಪ್ರಾಮುಖ್ಯತೆ ಇಲ್ಲದ ಕಾರಣ ಕನ್ನಡಕ್ಕೆ ಅನುವಾದಿಸಲಿಲ್ಲ. ಅದೂ ಅಲ್ಲದೆ ಬೆಂಗಳೂರಿನವರಿಗೆ ಅವೆರಡೂ ಬರುತ್ತದೆಯೆಂಬ ಕಲ್ಪನೆಯಲ್ಲಿ ನಾನಿದ್ದೇನೋ ಏನೋ? :)

Karna Natikar said...
This comment has been removed by the author.
Anonymous said...

namaskara..

Kannada da jana tumba swabhimanigalu, yakandre kannada matadake nachike,englishnalli matadidre maryade jasti ante.adke alli namma jana alap sakytaragiddare.

nanu maharashtra dalli ideene,ille eshto jana kannadigaru nan jote english or hindi le matadtare..nanu namma kannadigru anta kannada dalli..chennagidira? andre..avarua..tikha hai basu..aura kaisa chala raha hai antare.....

ottinalli kannadigare..kannadadli matadalu hinde munde nodidre....innu tamila jana kannada matadaraaa?....

idakke sidda ni enu antiya??

Karna Natikar said...

ನಾಲ್ಕೇ ಸಾಲುಗಳಲ್ಲಿ ಬೆಂಗಳೂರಿನಲ್ಲಿ ಕನ್ನಡದ ಪರಿಸ್ಥಿತಿ ಹೇಗೆ ಇದೆ ಎಂದು ಹೆಳಿದ್ದಿಯಾ ಸುಪರ್!!

C.A.Gundapi said...

maga .. Deepak helida hage Ee malikeyanna continue madu ..

ಸಿದ್ಧಾರ್ಥ said...

@ಬಸು, ಕರ್ಣ, ಗುಂಡಪಿ
ಧನ್ಯವಾದಗಳು. ನಿಮ್ಮ ಪ್ರೋತ್ಸಾಹವಿದೆಯೆಂದಮೇಲೆ ಖಂಡಿತ ಮುಂದುವರಿಸುತ್ತೇನೆ.