Tuesday, December 4, 2007

ನಾವು ಕನ್ನdigaru - ೧

ಸಂದರ್ಭ: ನನ್ನ ಬೈಕ್ ಸರ್ವಿಸ್ ಮಾಡಿಸಲು ಖಿವ್‍ರಾಜ್ ಮೋಟರ್ಸ್‌ಗೆ ಹೋಗಿದ್ದೆ. ಸರ್ವಿಸ್ ಮಾಡಲು ಇದ್ದ ಎರಡು ಯಂತ್ರಗಳಲ್ಲಿ ಒಂದು ಯಂತ್ರ ಕೆಟ್ಟುಹೋಗಿದ್ದ ಕಾರಣ ಕೇವಲ Free Serviceನವರಿಗೆ ಮಾತ್ರ ಪ್ರವೇಶ ಎಂದು 9 ಘಂಟೆಗೆ ಬಂದು ಬಾಗಿಲು ತೆಗೆದ ಅಂಗಡಿಯ ಸರ್ವಿಸ್ ಬಾಯ್ ಹೇಳಿದ. ಮುಂದಿನದನ್ನು ಅವರವರ ಮಾತುಗಳಲ್ಲೇ ಕೇಳಿ:

ಸ. ಬಾ. (ಸರ್ವಿಸ್ ಬಾಯ್) : ಒಂದು ಮಿಶಿನ್ ಕೆಟ್ಟುಬಿಟ್ಟಿದೆ ಸಾರ್. ಇವತ್ತು ಫ್ರೀ ಸರ್ವಿಸ್ ಅಸ್ಟೇ ಮಾಡೋದು.
ಆತ: ರೀ ಅದ್ ಹೇಗ್ರೀ ನೀವು ಹಾಗೆ ಹೇಳ್ತೀರಾ? ನಾವು ಇಷ್ಟು ಹೊತ್ತು ಕ್ಯೂದಲ್ಲಿ ನಿಂತಿಲ್ವಾ?
ಸ. ಬಾ. : ಏನೂ ಮಾಡಕಾಗಲ್ಲ ಸಾರ್. ಮಿಶಿನ್ ಕೆಟ್ಟೋಗಿದೆ. ನಾಳೆ ಬನ್ನಿ.
ಆತ: ಒಂದು ತಾಸು ಕ್ಯೂದಲ್ಲಿ ನಿಂತಿದೀವಿ. ಈಗ ಇವ್ರು ಹೀಗೆ ಹೇಳ್ತಾರಲ್ರೀ!
ಈತ: You are right sir. ನಾವು ಕ್ಯೂದಲ್ಲಿ ನಿಂತಾಗ್ಲೇ ಇವ್ರು ಬಂದು ಹೇಳ್ಬೇಕಿತ್ತು.
ಸ. ಬಾ. : ಹಾಗಲ್ಲ ಸಾರ್ ಅದು... ಮಿಶಿನ್ ಕೆಟ್ಟೋಗಿರೋದು ಈಗಸ್ಟೇ ಗೊತ್ತಾಯ್ತು.
ಆತ: ಏನು ಈಗ್ಲೇ ಕೆಟ್ಟೋಯ್ತ? ಒಂದೂ ಗಾಡಿ ಸೆರ್ವಿಸ್ ಮಾಡ್ಲಿಲ್ಲಾ.. ಕೆಟ್ಟೋಯ್ತಾ? what are you telling? we want service ಅಸ್ಟೆ.
ಸ. ಬಾ. : ಆಗಲ್ಲ ಸಾರ್.
ಈತ: Why ಆಗಲ್ಲ? Why ಆಗಲ್ಲ? We wait in queue for 1 hour & now you tell ಆಗಲ್ಲ. No no no no... We want service thats all.
ಆತ: Correct sir. We dont go without servicce. Call your manager. I speak. At any cost we want service

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

1 comment:

ದೀಪಕ said...

ನಮಸ್ಕಾರ/\:)

ಚೆನ್ನಾಗಿದೆ ಚೆನ್ನಾಗಿದೆ.. ಹುಯಿಲಗೋಳ ನಾರಾಯಣರಾಯರು ಇದ್ದಿದ್ದರೆ ತಮ್ಮ ಕವನವನ್ನು , ’ಅಸ್ತವಾಯಿತು ನಮ್ಮ ಚೆಲುವ ಕನ್ನಡನಾಡು’ ಅ೦ತ ಬದಲಾಯಿಸ್ತಾ ಇದ್ರೇನೋ !!

ಧನ್ಯವಾದಗಳೊ೦ದಿಗೆ,

ಇ೦ತಿ,

ದೀಪಕ