Wednesday, December 12, 2007

ನಾವು ಕನ್ನdigaru - ೩

ಸಂದರ್ಭ: ಮಾರತ್‌ಹಳ್ಳಿ ಬಸ್ ನಿಲ್ದಾಣ. ಗದ್ದಲವೋ ಗದ್ದಲ. ಗೌಜಿಯೋ ಗೌಜಿ. ಆದರೆ ಎಲ್ಲೂ ಕನ್ನಡ ಮಾತ್ರ ಕೇಳಿಬರುವುದಿಲ್ಲ. ಇತ್ತ ಎನ್ನಡ ಅತ್ತ ಎಕ್ಕಡ. ಸೇಬುಹಣ್ಣು ಕೊಳ್ಳಲು ಹೋಗಿದ್ದೆ.

ನಾನು: ಒಂದು ಕಿಲೊ ಸೇಬು ಹಣ್ಣು ಹೇಗಪ್ಪಾ?
ವ್ಯಾಪಾರಿ: ಅಂಜು ರೂಬಾ...
ನಾನು: ಆಂ ???
ವ್ಯಾಪಾರಿ: Fifty rupees...

ಇಂಗ್ಲೀಷ್ ಕಲಿಯುತ್ತಾರೆ. ಕನ್ನಡ ಕಲಿಯಲು ಏನಪ್ಪಾ ತೊಂದರೆ ಎಂದುಕೊಳ್ಳುತ್ತಾ ಹೊರಬೀಳುತ್ತಿದ್ದೆ. ಅಷ್ಟರಲ್ಲಿ ಒಬ್ಬ ವ್ಯಕ್ತಿ ನನ್ನನ್ನು ನೋಡಿ, "ಸಾರ್ ಮಲಯಾಲಮ್ಮಾ???" ಎಂದ. ಯಾವ ಮಲಯಾಳಿ ಚಿತ್ರದಲ್ಲಿ ನನ್ನಂಥವನನ್ನೇ ನೋಡಿದ್ದನೋ ಏನೋ. ನನಗಂತೂ ರೋಸಿ ಹೋಗಿತ್ತು. "ಕನ್ನಡ... ಕನ್ನಡ..." ಎಂದೆ. ಗಟ್ಟಿಯಾಗಿ. "ಓ.. ಹಿ.. ಹಿ.." ಎಂದು ಹಲ್ಲು ಕಿರಿದುಕೊಂಡು ಹೋದ.

ಇಷ್ಟೆಲ್ಲಾ ಮುಗಿಸಿ ಒಂದು ಸಂತೂರ್ ಸೋಪ್ ಕೊಳ್ಳಲು ಮನೆಯ ಹತ್ತಿರವೇ ಇದ್ದ ಒಂದು ಅಂಗಡಿಗೆ ಹೋದೆ.

ನಾನು: ಸಂತೂರ್ ಸೋಪ್
ಅಂಗಡಿಯವ: ತೆಲಗಾ ಸಾರ್?
ನಾನು: ( ಊಹೂಂ ಎಂಬಂತೆ ತಲೆಯಾಡಿಸಿದೆ )
ಅಂಗಡಿಯವ: ತಮಿಳಾ?
ನಾನು: ( ಮತ್ತೆ ತಲೆಯಾಡಿಸಿದೆ )
ಅಂಗಡಿಯವ: ಓ ಗನ್ನಡಾ???
ನಾನು: ( ಸುಮ್ಮನೆ ಮುಗುಳ್ನಕ್ಕೆ )
ಅಂಗಡಿಯವ ಸಂತೂರ್ ಸೋಪ್ ಕೊಟ್ಟು "ತೆಗೆದುಗೊಲ್ಲಿ" ಎಂದು ನಕ್ಕ.
ಒಬ್ಬನಾದರೂ ’ಗನ್ನಡ ಗಲಿಯುತ್ತಿದ್ದಾನಲ್ಲಾ’ ಎಂದು ಸಂತೋಷವಾಯಿತು.

ಅಲ್ಲಿಗೆ, ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

3 comments:

ದೀಪಕ said...

ನಮಸ್ಕಾರ/\:)

ಚೆನ್ನಾಗಿದೆ.. ಚೆನ್ನಾಗಿದೆ.. ಮಾರತಹಳ್ಳಿ ಬೆ೦ಗಳೂರಿನ ಭಾಗವೇ ಅಲ್ಲವೆ೦ಬ ಸುದ್ಧಿಗೆ ಈ ಸನ್ನಿವೇಶಗಳು ಪುಷ್ಟೀಕರಿಸಿ ನಿಜ ಮಾಡುತ್ತಿರುವ ವಿಷಯ ವಿಷಾದನೀಯ.

ಉಧಯವಾಗಲಿ ಗನ್ನಡ ನಡು.
ಜೈ ಗರ್ನಾಡಗಾರ್ ಮಾತೇ !!

ಕನ್ನಡ ತಾಯಿಯ ರೋಧನ ಕನ್ನಡಿಗರ ಕಿವೆಗೆ ತಲುಪಿ೦ದ೦ತೆ ಕಾಣುತ್ತಿಲ್ಲ :(

ಇ೦ತಿ,

ದೀಪಕ

ದೀಪಕ said...

ಕನ್ನಡ ತಾಯಿಯ ರೋಧನ ಕನ್ನಡಿಗರ ಕಿವೆಗೆ ತಲುಪಿ೦ದ೦ತೆ ಕಾಣುತ್ತಿಲ್ಲ :(

ಅಲ್ಲ

ಕನ್ನಡ ತಾಯಿಯ ರೋಧನ ಕನ್ನಡಿಗರ ಕಿವಿಗೆ ತಲುಪಿದ೦ತೆ ಕಾಣುತ್ತಿಲ್ಲ :(

ಸಿದ್ಧಾರ್ಥ said...

ನಮಗೆಲ್ಲಿ ಕೇಳಬೇಕು? ನಮ್ಮ ಕಿವಿಯ ತುಂಬ ಸ್ವಾಭಿಮಾನಶೂನ್ಯತೆಯ ಗುಗ್ಗೆ ತುಂಬಿದೆಯಲ್ಲ!!!

ಇಂತಹ ಉದಾಹರಣೆಗಳು ಬಹಳಷ್ಟು ಸಿಗುತ್ತಿವೆ. ನನಗೇ ಬರೆಯಲು ಬೇಸರವಾಗುತ್ತಿದೆ. ಮೂರಕ್ಕೇ ಮುಕ್ತಾಯ ಹೇಳಬೇಕೆಂದಿದ್ದೇನೆ.