Thursday, November 22, 2007

ಉದಯವಾಯಿತು ಚೆಲುವ ಕನ್ನಡ ನಾಡು

====================
ರಚನೆ: ಶ್ರೀಯುತ ರಿಚರ್ಡ್ ಲೂಯಿಸ್
====================

ಕನ್ನಡ ಕಸ್ತೂರಿ ಅಂತಾರೆ.
ಆದರೆ, ಇಂಥಾ ನಮ್ಮ ಕನ್ನಡದ ಪರಿಸ್ಥಿತಿ ನಮ್ಮ ಕರ್ನಾಟಕದಲ್ಲಿ ಏನಾಗಿದ್ಯಪ್ಪಾ ಅಂತಂದ್ರೆ,
ನಾವು ಕನ್ನಡ ಅಂದ್ರೆ ಇನ್ನೊಬ್ಬ ಅಂತಾನೆ ’ಎನ್ನಡ’
ಅಲ್ಲಪ್ಪಾ ನಾನು ಮಾತಾದಿದ್ದು ಕನ್ನಡ,
ಇವ್ನಂತಾನಲ್ಲ ಎನ್ನಡ ಅಂತ ಇನ್ನೊಬ್ನಿಗೆ ಹೇಳಿದ್ರೆ
ಅವನಂತಾನೆ ’ಏಮ್ರಾ ಎಕ್ಕಡ?’

ಅಯ್ಯಯ್ಯೋ ಈ ಕನ್ನಡ ನಾಡ್ನಲ್ಲಿ ಕನ್ನಡವೇ ಇಲ್ವಲ್ಲಪ್ಪಾ
ಇಲ್ನೋಡಿದ್ರೆ ಎನ್ನಡ ಅಲ್ನೋಡಿದ್ರೆ ಎಕ್ಕಡ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು.

ಕನ್ನಡ ಕಸ್ತೂರಿ ಭಾಷೆ ಗತಿ ಹೀಗಾಯ್ತು.
ಹೋಗ್ಲಿ ನಮ್ಮ ಕನ್ನಡಿಗರ ಹೃದಯದಂತಿರುವ
ವಿಶಾಲವಾದ ಕರ್ನಾಟಕ ರಾಜ್ಯದ ಗತಿ ಏನಾಯ್ತಪ್ಪಾ ಅಂತಂದ್ರೆ,

ಕಾಸರಗೋಡು ಕೇರಳಾಕ್ಕೆ ಸೇರೋಯ್ತು.
ಬೆಳಗಾಮು ಮಹಾರಾಷ್ಟ್ರಕ್ಕೆ ಸೇರಲೇಬೇಕು.
ಕೋಲಾರ ಚೆನ್ನೈಗೆ ರಾಯಚೂರು ಆಂದ್ರಕ್ಕೆ
ಕಾವೇರಿ ಚೆನ್ನೈಗೆ ಕೃಷ್ಣಾ ನೀರು ಆಂದ್ರಕ್ಕೆ
ಸೇರ್‍ಬೇಕು ಸೇರ್‍ಬೇಕು ಸೇರಲೇಬೇಕು.
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ವಿಶಾಲ ಕರ್ನಾಟಕದ ಪರಿಸ್ಥಿತಿ ಹೀಗಾಯ್ತು.
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಏನಾಯ್ತಪ್ಪಾ ಅಂತಂದ್ರೆ,

ಸದಾಶಿವನಗರ ಬರೀ ಸಿಂದಿ ಗುಜರಾತಿಗಳದು
ಚಿಕ್ಕಪೇಟೆ ಬಳೇಪೇಟೆಗಳು ಬರೀ ಮಾರ್ವಾಡಿಗಳದು
ಅಳಿದುಳಿದ ಮಾವಳ್ಳಿ ಗುಟ್ಟಳ್ಳಿ ಸುಂಕೇನಳ್ಳಿ
ಹಳ್ಳಿ ಪಳ್ಳಿಗಳೆಲ್ಲಾ ಕನ್ನಡಿಗರದು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ನಮ್ಮ ಭಾಷೆನೂ ಹಿಂಗಾಯ್ತು, ರಾಜ್ಯಾನೂ ಹಿಂಗಾಯ್ತು
ನಮ್ಮ ಕಲೆ ಸಂಸ್ಕೃತಿಯ ಕನ್ನಡಿ ಈ ನಮ್ಮ ಟಿವಿ ಚಾನಲ್‍ಗಳ ಗತಿ ಏನಾಯ್ತಪ್ಪಾ ಅಂತಂದ್ರೆ,

ನಿಮ್ಮ ಉದಯಾ ಟಿವಿಗೆ ಮದ್ರಾಸಿನ ಯಜಮಾನರು
ನಮ್ಮ ಈ ಟಿವಿಕ್ಕ್ ಆಂದ್ರಾವಾರು ಯಜಮಾನರು
ಕಾವೇರಿ ಕೇರಳ, ಮುಂಬೈದು ಸುಪ್ರಭಾತ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಟಿವಿ ಸ್ಥಿತಿಯೇನೋ ಹೀಗಾಯ್ತು,
ಚಲನಚಿತ್ರಗಳ ಗತಿ ಏನಪ್ಪಾ ಅಂದ್ರೆ,

ಕನ್ನಡದ ಹೀರೋಯಿನ್‍ಗಳೆಲ್ಲಾ ಬಾಂಬೆ ಮದ್ರಾಸಿನವರು
ಕನ್ನಡದ ನಿರ್ದೇಶಕರೆಲ್ಲಾ ಕೇರಳ ಆಂದ್ರದವರು
ಲೈಟ್‍ಬಾಯ್ಸು ಕನ್ನಡದವರು ಸೆಟ್‍ಬಾಯ್ಸು ಕನ್ನಡದವರು
ಎಕ್ಸ್ಟ್ರಾಸು ಕನ್ನಡದವರು ಕ್ಯಾಂಪ್‍ಬಾಯ್ಸು ಕನ್ನಡದವರು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಕಲೆ ಸ್ಥಿತಿ ಹಿಂಗಾಯ್ತು, ಸಂಸ್ಕೃತಿನೂ ಹಿಂಗಾಯ್ತು
ರಾಜ್ಯದ ಆಡಳಿತ ಹೇಗಾಯ್ತಪ್ಪಾ ಅಂತಂದ್ರೆ,

ಐ ಎ ಎಸ್ ಆಫೀಸರುಗಳೆಲ್ಲಾ ಬಂಗಾಲದವರು
ಐ ಪಿ ಎಸ್ ಆಫೀಸರುಗಳೆಲ್ಲಾ ನಯಿದಿಲ್ಲಿಯವರು
ಡ್ರೈವರ್‍ಗಳು ಕನ್ನಡದವರು ಪಿಸಿಗಳು ಕನ್ನಡದವರು
ಮುಸರೆ ತಿಕ್ಕೋರು ಕನ್ನಡದವರು ಕೂಲಿ ಮಾಡೋರು ಕನ್ನಡದವರು
ಗಾಡಿ ಎಳ್ಯೋರು ಕನ್ನಡದವರು ಬೀಡಿ ಸೇದೋರು ಕನ್ನಡದವರು
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಅಣ್ಣಾ ಚೆನ್ನೈ ಅಣ್ಣಾ,
ಎನ್ನಡಾ?
ಅಣ್ಣಾ ಆಂದ್ರದ್ ಅಣ್ಣಾ
ಏಮಿರಾ?
ನಿಮ್‍ಮೇಲೆ ನಮಗೇನೂ ಕೋಪ ಇಲ್ಲಾ
ನಾವು ನಿಮ್ಮನ್ನ ಕೇಳೋದಿಷ್ಟೆ

ನೀವಿಲ್ಲಿ ಬಂದಾಯ್ತು ಬಂದಿಲ್ಲಿ ನೆಲೆಸಾಯ್ತು
ಅನ್ನಬೇಡ ಎನ್ನಡ ಕಲಿ ಸ್ವಲ್ಪ ಕನ್ನಡ
ಪ್ರೀತಿಯಿಂದ ಕರೆದಾಗ ಎತ್ತಬೇಡ ಎಕ್ಕಡ
ಎನ್ನಡ ಎಕ್ಕಡ ಬಿಟ್ಟು ಕಲಿ ಕನ್ನಡ
ಅಲ್ಲಿಗೆ,
ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು

ಹಾಡನ್ನು ಆನಂದಿಸಲು ಈ ಕೊಂಡಿಗೆ ಹೋಗಿರಿ

2 comments:

ದೀಪಕ said...

ನಮಸ್ಕಾರ/\:)

ರಿಚರ್ಡ್ ಲೂಯಿಸ್ ಕೂಡ ಹಾಸ್ಯ ವಾಗ್ಮಿಗಳಲ್ಲಿ ಒಬ್ಬರು. ಉದಯ ವಾಹಿನಿಯಲ್ಲಿ ಬರುವ 'ಹರಟೆ'ಯಲ್ಲಿ ಇವರ ಮತ್ತು ಸುಧಾ ಬರಗೂರರ ಮಧ್ಯೆ ನಡೆಯುವ ವಾಗ್ವಾದ ನೋಡಲು ಖುಷಿಕೊಡುತ್ತದೆ.

ಮತ್ತೆ ಇಲ್ಲಿ 'ಸುಪ್ರಭಾತ'ವಾಹಿನಿಯ ಬಗ್ಗೆ ಹೇಳಿದ್ದಾರೆ. ಆದರೇ, ಆ ವಾಹಿನಿ ನಿ೦ತು ಎಷ್ಟೋ ವರುಷಗಳಾಗಿವೆ. ಅದರ ಬದಲು 'ಜೀ ವಾಹಿನಿ'ಯ ಬಗ್ಗೆ ಪ್ರಸ್ತಾಪ ಮಾಡಿದ್ದರಬಹುದಾಗಿತ್ತು. ಈ ಹಾಡನ್ನು ಆ ವಾಹಿನಿ ಪ್ರಕಟಗೊಳ್ಳೂತ್ತಿದ್ದ ಸಮಯದಲ್ಲಿ ದಾಖಲಿಸಿದ್ದಿರಬೇಕು.

ವ೦ದನೆಗಳೊ೦ದಿಗೆ,

ಇ೦ತಿ,

ದೀಪಕ

ಸಿದ್ಧಾರ್ಥ said...

ಹೌದು. ನನಗೂ ಹಾಗೇ ಅನಿಸಿತು. ಸುಪ್ರಭಾತ ವಾಹಿನಿ ಆಗಲೇ ನಿಂತು ಹೋಗಿ ವರ್ಷಗಳೇ ಕಳೆದಿವೆ. ಈ ಗೀತೆಯನ್ನು ಕೂಡಾ ಅದೇ ಕಾಲದ ಯಾವುದೋ ಸಿನೆಮಾದಲ್ಲಿ ಬಳಸಿಕೊಂಡಿದ್ದಾರೆ. ಇದರ ಬಗ್ಗೆ ನಾವು ಬಹಳ ತಡವಾಗಿ ಲಕ್ಷಕೊಡುತ್ತಿದ್ದೇವಷ್ಟೆ.

ನಿಜಕ್ಕೂ ರಿಚರ್ಡ್ ಲೂಯಿಸ್ ಅವರ ಹಾಸ್ಯಮಿಶ್ರಿತ ವಿಡಂಬನೆ ಅದ್ಭುತ.